ಜಿಲ್ಲೆ

ನನ್ನದಿನ್ನೂ ಚಿಕ್ಕ ವಯಸ್ಸು: ಕುಸುಮಾ ಹೇಳಿಕೆ

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಅವರು ತಿಳಿಸಿದರು.

ದಿಗ್ವಿಜಯ ನ್ಯೂಸ್​ ಜತೆಗೆ ಮಾತನಾಡಿ, ಬಿ ಫಾರಂ ಸಿಕ್ಕ ದಿನದಿಂದ ಪ್ರಚಾರ ಮಾಡುತ್ತಿದ್ದೇನೆ. ಆರ್​ಆರ್ ನಗರ ಜನರಿಂದ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ. ಬಿ ಫಾರಂ ಸಿಕ್ಕಾಗ ಇದ್ದ ಬೆಂಬಲಕ್ಕಿಂತಲೂ ಈಗ ಹೆಚ್ಚು ಬೆಂಬಲ ಸಿಗುತ್ತಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲದಲ್ಲಿ ಕೊಟ್ಟ ಅನುದಾನದಿಂದ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಆಗಿದೆ. ಕೆಲವು ಕಡೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ನನಗೆ ಅವಕಾಶ ಕೊಟ್ಟರೆ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ನನ್ನ ವಿರೋಧಿ ಅಭ್ಯರ್ಥಿಗಳ ಬಗ್ಗೆ ಮಾತನಾಡಲ್ಲ. ನನ್ನ ವಿಚಾರಗಳನ್ನು ಮತ್ತು ಕ್ಷೇತ್ರದ ವಿಚಾರಗಳನ್ನು ಮಾತ್ರ ಹೇಳ್ತಿದ್ದೇನೆ. ಕರೊನಾದಿಂದ ಹಲವರು ಕ್ಷೇತ್ರ ಬಿಟ್ಟು ಹೋಗಿದ್ದಾರೆ. ಅವರಿಗೆ ಆರೋಗ್ಯ ಸೌಕರ್ಯ ಕೊಟ್ಟು, ಧೈರ್ಯ ತುಂಬುವ ಕೆಲಸ ಮಾಡುತ್ತೇನೆ. ನಿರುದ್ಯೋಗ ಯುವಕ ಮತ್ತು ಯುವತಿಯರು ಇದ್ದಾರೆ ಅವರಿಗೆ ಕೆಲಸ ಕೊಡಿಸುವ ಜವಾಬ್ದಾರಿ ನನ್ನ ಮೇಲೆ ಇದೆ ಎಂದು ತಿಳಿಸಿದರು.

ನನಗೆ ಅವಕಾಶ ಕೊಟ್ಟರೆ ಎಲ್ಲ‌ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ. ಗೆಲ್ಲುವ ವಿಶ್ವಾಸ ನನಗೆ ಇದೆ. ನನ್ನದಿನ್ನೂ ಚಿಕ್ಕ ವಯಸ್ಸು, ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದೇನೆ ಎಂದರು. ಇದೇ ವೇಳೆ ಎಲ್ಲರಿಗೂ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಶುಭಕೋರಿದರು. (ದಿಗ್ವಿಜಯ ನ್ಯೂಸ್​)