Invitation to a poetry competition 
ಜಿಲ್ಲೆ

ಹಿಂದು ಎಂದು ನೋಡಿ ಗುಂಡು ಹೊಡೆದಿಲ್ಲವೆಂದು ನಾನು ಹೇಳಿಲ್ಲ

ಬಾಗಲಕೋಟೆ: ಪಹಲ್ಗಾಮ್​ ಟನೆಯಲ್ಲಿ ಉಗ್ರರು ಹಿಂದುಗಳನ್ನು ಹುಡುಕಿ ಹುಡುಕಿ ಗುಂಡು ಹೊಡೆದಿದ್ದಾರೆ ಎನ್ನುವ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಅಬಕಾರಿ ಸಚಿವ ಆರ್​.ಬಿ.ತಿಮ್ಮಾಪೂರ ಇದೀಗ ತಾವು ಹಾಗೆ ಹೇಳಿಯೇ ಇಲ್ಲ ಎಂದು ಯೂರ್ಟನ್​ ಹೊಡೆದಿದ್ದಾರೆ.

ಜಿಲ್ಲೆಯ ಕೂಡಲಸಂಗಮದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ತಿಮ್ಮಾಪೂರ, ನಾನು ಖಡಾ ಖಂಡಿತವಾಗಿ ಆ ರೀತಿ ಹೇಳಿಲ್ಲ. ನಾನು ನೋಡಿದ ಕೆಲ ಮಾಧ್ಯಮಗಳಲ್ಲಿ ಅದು ಬಂದಿರಲಿಲ್ಲ. ಹೀಗಾಗಿ ನಾನು ಹಿಂದುಗಳನ್ನು ಗುರುತಿಸಿ ಗುಂಡು ಹೊಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೆ ಅಷ್ಟೆ ಎಂದರು.

ಭಯೋತ್ಪಾದನೆಯನ್ನು ನಾನು ಖಂಡಿಸುತ್ತೇನೆ. ಅಲ್ಲಿನ ಪ್ರವಾಸಿಗರಿಗೆ, ಸಾಮಾನ್ಯ ನಾಗರಿಕರಿಗೆ ರಕ್ಷಣೆ ಕೊಡುವುದು ನಮ್ಮ ಧರ್ಮ. ಅದು ಅಲ್ಲಿ ಪಾಲನೆ ಆಗಿಲ್ಲ ಎನ್ನುವ ನೋವು ವ್ಯಕ್ತಪಡಿಸಿದ್ದೇನೆ. ನಾವೆಲ್ಲರೂ ದೇಶದ ವಿಚಾರದಲ್ಲಿ ಪಕ್ಷ, ಪಂಗಡ, ರಾಜಕೀಯ ತರದೆ ಎಲ್ಲರೂ ಒಟ್ಟಾಗಿ ಎದುರಿಸಬೇಕೆ ವಿನಾ ಅದರಲ್ಲಿ ಸಣ್ಣ ಪುಟ್ಟ ವಿಷಯಗಳನ್ನು ತರುವುದು ದೇಶಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಎಎಸ್ಪಿ ಕಡೆಗೆ ಕೈ ಮಾಡಿದ ಸಿಎಂ ನಡೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಿಎಂ ಅವರು ಏಯ್​ ನೀನು ಹೀಗೇಕೆ ಮಾಡಿದೆ ಎಂದಿರಬಹುದು. ಸಿಎಂ ಕೈ ಮಾಡಿದ್ದು ಪೊಲೀಸ್​ ಅಧಿಕಾರಿಗೆ ಎಂದು ಯಾಕೆ ತಿಳಿದುಕೊಳ್ಳುತ್ತೀರಿ? ಕೈ ಮಾಡಿದರು ಎಂದು ಯಾಕೆ ಅಂದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದ ಸಚಿವ ತಿಮ್ಮಾಪೂರ, ಈ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಐಎಎಸ್​ ಅಧಿಕಾರಿ ಕಡೆಗೆ ಕೈ ಮಾಡಿರಲಿಲ್ವ? ಎಮೋಷನ್​ನಲ್ಲಿ ಮಾಡಿದ್ದರೂ ಮಾಡಿರಬಹುದು ಎಂದರು.