ಮಳವಳ್ಳಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮರು ಪ್ರತಿಷ್ಠಾಪನಾ ಧರ್ಮ ಸಮಾರಂಭವನ್ನು ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಕೆ.ಜಿ.ಪ್ರಶಾಂತ್, ಹಾಲುಸ್ವಾಮಿ ಗೌಡ, ಎಚ್.ವಿ.ಈಶ್ವರಪ್ಪ, ನಾಗರಾಜಪ್ಪ ಗೌಡ, ಮಧುಸೂಧನ ಇತರರಿದ್ದರು.  
ಜಿಲ್ಲೆ

ನಾನು, ನನ್ನದು ಎಂಬ ಅಹಂಭಾವ ಸಲ್ಲ

Shivamogga - Desk - Vinayakumar D B

ರಿಪ್ಪನ್‌ಪೇಟೆ: ಏನು ಬರಬೇಕು ಎಂದು ತೀರ್ಮಾನಿಸಿ ಸೃಷ್ಟಿಕೊಳ್ಳುವುದು ನಿಜವಾದ ಸಾಧನೆ ಎಂದು ಮಳಲಿ ಮಠದ ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಮಳವಳ್ಳಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮರುಪ್ರತಿಷ್ಠಾಪನಾ ಪ್ರಯುಕ್ತ ಹಮ್ಮಿಕೊಂಡಿದ್ದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ನಾನು, ನನ್ನದು ಎನ್ನುವ ಅಹಂ ಭಾವವನ್ನು ಬಿಟ್ಟಾಗಲೇ ಕಲಿಯಲು ಮತ್ತು ಬೆಳೆಯಲು ಸಾಧ್ಯ. ಆದ್ದರಿಂದ ಭಗವಂತನ ಸೃಷ್ಟಿಯಲ್ಲಿ ನಾವೆಲ್ಲರೂ ಕಿಂಕರಾಗಿ ಬದುಕುವುದು ಬಹಳ ಶ್ರೇಷ್ಠ. ಶ್ರೀ ಗುರು, ತಂದೆ-ತಾಯಿಯನ್ನು ಗೌರವಿಸಿ ಬದುಕು ಸಾಗಿಸುವುದರ ಜತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮನುಕುಲ ಉದ್ಧಾರದ ಧರ್ಮ ಸೂತ್ರಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸುವುದೆ ನಿಜವಾದ ಜೀವನವಾಗಿದೆ ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ನಾಗರಾಜಪ್ಪ ಗೌಡ, ಹಾಲುಸ್ವಾಮಿ ಗೌಡ, ದೇವರಾಜ, ಮುಖಂಡರಾದ ಕೆ.ಜಿ.ಪ್ರಶಾಂತ, ಎಚ್.ವಿ.ಈಶ್ವರಪ್ಪ, ಆಲುವಳ್ಳಿ ವೀರೇಶ, ಹೊನಗೋಡು ರತ್ನಾಕರ, ಸಂತೋಷ್, ಗ್ರಾಪಂ ಸದಸ್ಯರಾದ ಚಂದ್ರಶೇಖರ, ಉಮಾಕರ, ಮಧುಸೂಧನ ಇತರರಿದ್ದರು.