I am the CM but I will buy a thousand JCBs. 
ಜಿಲ್ಲೆ

ನಾನು ಸಿಎಂ ಆದರೆ ಸಾವಿರ ಜೆಸಿಬಿ ಖರೀದಿಸುವೆ

ಗುಳೇದಗುಡ್ಡ: ದೇಶವನ್ನು ವಿರೋಧಿಸುವ, ಲವ್ ಜಿಹಾದ್, ಗೋಹತ್ಯೆ ಮಾಡುವ, ವಕ್ಫ್ ಆಸ್ತಿ ನುಂಗುವ, ಪೊಲೀಸ್ ಸ್ಟೇಷನ್ ಮೇಲೆ ಕಲ್ಲೆಸೆಯುವುದು, ಪೊಲೀಸ್ ಜೀಪ್ ಮೇಲೆ ನಿಂತು ಭಾಷಣ ಮಾಡುವುದು, ಮಹಿಳಾ ಪೊಲೀಸ್ ಮೈಮೇಲೆ ಹೋಗುವ ಕೃತ್ಯ ನಡೆದರೂ ಕಾಂಗ್ರೆಸ್ ಏನೂ ಮಾಡಲಿಲ್ಲ. ನಾನೇನಾದರು ಮುಖ್ಯಮಂತ್ರಿಯಾದರೆ ಇದೆಲ್ಲ ಸಮಾಪ್ತಿಯಾಗುತ್ತದೆ. ಅದಕ್ಕಾಗಿ ಸಾವಿರ ಜೆಸಿಬಿ ಖರೀದಿಸುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದ ಸಮಸ್ತ ಹಿಂದು ಸಮಾಜದ ವತಿಯಿಂದ ಭಾನುವಾರ ರಾತ್ರಿ ಗಚ್ಚಿನಕಟ್ಟಿಯ ಶ್ರೀ ಕೃಷ್ಣದೇವರಾಯ ಹಾಗೂ ಇಮ್ಮಡಿ ಪುಲಕೇಶಿ ವೇದಿಕೆ ಮೇಲೆ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮೀಜಿಗಳಲ್ಲೂ ಕಲರಬೆರಿಕೆಯಾಗಿದೆ. ನಮ್ಮ ಧರ್ಮವನ್ನು ಬೆಳೆಸುವುದು ಬಿಟ್ಟು ಲಿಂಗಾಯತ ಹಾಗೂ ಇಸ್ಲಾಂ ಧರ್ಮ ಸಮ ಎಂದು ಹೇಳುವ ಸಾಣೇಹಳ್ಳಿ ಶ್ರೀಗಳಲ್ಲ. ಅವರು ಶ್ಯಾಣೆಹಳ್ಳಿ ಶ್ರೀ. ಇನ್ನು ಮುಂದೆ ಹಿಂದು ಧರ್ಮದ ಬಗ್ಗೆ ಮಾತನಾಡದ ಮತ್ತು ಮತ್ತೊಂದು ಧರ್ಮದವರನ್ನು ಭಾಯಿ ಭಾಯಿ ಅನ್ನುವ ಸ್ವಾಮಿಗಳಿಗೆ ಕೈ ಮುಗಿಯಬೇಡಿ ಎಂದರು.

ನಮ್ಮ ಧರ್ಮದ ಪರವಾಗಿ ಮಾತನಾಡುವ ಶ್ರೀಗಳಿಗೆ ಬೆಂಬಲವಾಗಿ ನಿಲ್ಲಿ, ಅವರೊಂದಿಗೆ ಕೈ ಜೋಡಿಸಿ . ಈ ದೇಶದಲ್ಲಿ ಶಿವಾಜಿ ಮಹಾರಾಜರು ಹುಟ್ಟದೆ ಇದ್ದಿದ್ದರೆ ಹಿಂದು ಸಮಾಜ ಉಳಿಯಲು ಸಾಧ್ಯವಿರಲಿಲ್ಲ. ಈ ದೇಶದಲ್ಲಿ ನೂರಾರು ವರ್ಷಗಳಿಂದ ನಮ್ಮ ಪೂರ್ವಜರು ಹಿಂದುಗಳಾಗಿ ಉಳಿದುಕೊಂಡು ಬಂದಿದ್ದು ನೋಡಿದರೆ ಅವರೆಲ್ಲ ಹಿಂದು ಹುಲಿಗಳೇ ಎಂದರು.

ಮುಸ್ಲಿಂ ಮಹಿಳೆಯರ ರಕ್ಷಣೆಗೆ ತರಬೇತಿ ನೀಡಲು ಸರ್ಕಾರ ಹಣ ಖರ್ಚು ಮಾಡಲು ನಿರ್ಧರಿಸಿದೆ.

ಅದು ಯಾಕೆ? ಎಂದು ಪ್ರಶ್ನಿಸಿ. ಇನ್ನು ಮುಂದೆ ಹಿಂದುಗಳು ಒಂದಾಗಿ, ಜಾತಿ ನೋಡದೆ ಉತ್ತಮರನ್ನು ಗೆಲ್ಲಿಸಿ. ಅಂದಾಗ ದೇಶ, ಹಿಂದುತ್ವ ಉಳಿಯುತ್ತದೆ ಎಂದರು.