ಜಿಲ್ಲೆ

ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಮತ್ತೆ ಗೊಂದಲ ಮೂಡಿಸಿದ ಡಿಕೆಶಿ

ಚನ್ನಪಟ್ಟಣ: ಉಪಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗುತ್ತೇನೆಂದು ಪುನ: ಉಚ್ಛರಿಸಿದ ಡಿ.ಕೆ.ಶಿವಕುಮಾರ್​, ನಾನು ಅಭ್ಯರ್ಥಿಯಾದರೆ ಕಾಂಗ್ರೆಸ್​ನವನಾಗಿರುತ್ತೇನೆ. ಅದೇರೀತಿ ಬೇರೆಯವರು ನಮ್ಮ ಪಕ್ಷದಿಂದ ಅಭ್ಯರ್ಥಿಯಾದರೆ ಅವರೂ ಕಾಂಗ್ರೆಸ್​ನವರೇ ಆಗಿರುತ್ತಾರೆ. ಅಭ್ಯರ್ಥಿ ಯಾರೇ ಆದರೂ ಅದು ನಾನೇ ಎಂದು ಭಾವಿಸಿ ಮತ ನೀಡಬೇಕು ಎಂದರು.

ನೀವು ನನಗಾಗಲೀ, ನಮ್ಮ ಪಕ್ಷದ ಅಭ್ಯರ್ಥಿಗಾಗಲೀ ಮತ ಹಾಕಿದರೆ ಅದು ಕಾಂಗ್ರೆಸ್​ಗೆ ಹಾಕಿದಂತಾಗುತ್ತದೆ. ಸ್ಥಳಿಯ ಮುಖಂಡರು ಈಗಾಗಲೇ ಮಾಜಿ ಸಂಸದ ಡಿ.ಕೆ.ಸುರೇಶ್​ ಅವರನ್ನು ಉಪಚುನಾವಣೆಯಲ್ಲಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಮೈತ್ರಿ ಪಕ್ಷದ ಅಭ್ಯರ್ಥಿ ಯಾರಾಗುತ್ತಾರೆ ಎಂಬುದಕ್ಕಿಂತ ನಮ್ಮ ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿ ಆಯ್ಕೆ ಮಾಡುವುದು ಸೂಕ್ತ. ನಾನು ಯಾರದ್ದೋ ಮಾತು ಕೇಳಿ ತೀರ್ಮಾನ ಮಾಡುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಅಭ್ಯರ್ಥಿ ಆಯ್ಕೆಯಾಗುತ್ತದೆ. ಈಗಾಗಲೇ ಕ್ಷೇತ್ರದ ಕಾರ್ಯಕರ್ತ ಮುಖಂಡರು ಅಭ್ಯರ್ಥಿಯ ಬಗ್ಗೆ ತಲೆಕೆಡಿಸಿಕೊಳ್ಳದೇ ಪಕ್ಷ ಸಂಟನೆಗೆ ಪ್ರತಿಯೊಬ್ಬರೂ ಗಮನಹರಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಸರ್ಕಾರ ಈಗಾಗಲೇ ಹತ್ತು ಹಲವು ಯೋಜನೆಗಳಿಗೆ ಕಾರ್ಯಸೂಚಿ ಹೊರಡಿಸಿದೆ. ಪ್ರಮುಖವಾಗಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಉದ್ಯೋಗ ಮೇಳ, ನಿವೇಶನ ಹಂಚಿಕೆ, ಮನೆ ಹಂಚಿಕೆಯಂತಹ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಇದ್ದವರು ಮಾಡಲಾಗದ ಕೆಲಸಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ. ಮೈತ್ರಿ ಪಕ್ಷದ ಮುಖಂಡರು ದೊಡ್ಡವರಿದ್ದಾರೆ. ಅವರು ಏನೇ ಮಾತನಾಡಲಿ ಸ್ವಂತ ಜಿಲ್ಲೆಯವರಾದ ನಾವು ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಮೂಲಕ ಉತ್ತರ ಹೇಳುತ್ತೇವೆ ಎಂದು ಹೇಳಿದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅಭ್ಯರ್ಥಿಯಾಗುವುದಿಲ್ಲ. ಈ ೇತ್ರದಲ್ಲಿ ಸ್ಪರ್ಧಿಸಿದ್ದಾರೆ ಎನ್ನುವುದನ್ನು ಬಿಟ್ಟರೆ ಈ ಚುನಾವಣೆಯ ಟೆನ್ಷನ್​ ಅವರಿಗಿಲ್ಲ. ಅವರು ನೇರವಾಗಿ ಸ್ಪರ್ಧಿಸಿದ್ದರೆ ಮಾತ್ರ ಈ ಬಗ್ಗೆ ಅವರಿಗೆ ಚಿಂತೆ ಕಾಡುತ್ತಿತ್ತು. ಬೇರೆ ಅಭ್ಯರ್ಥಿಗಳು ಚುನಾವಣೆ ಎದುರಿಸುವುದರಿಂದ ಅವರ್ಯಾಕೆ ಟೆನ್ಷನ್​ ಮಾಡಿಕೊಳ್ಳುತ್ತಾರೆ. > ಡಿ.ಕೆ.ಶಿವಕುಮಾರ್​, ಉಪಮುಖ್ಯಮಂತ್ರಿ

ದೇಶಪಾಂಡೆ ಹೇಳಿಕೆ ಸಂತೋಷ:

ಸಿ.ಎಂ.ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್​ ಅನುಮತಿಯಿಂದ ತೊಂದರೆಯಾದರೆ ನಾನೇ ಮುಖ್ಯಮಂತ್ರಿಯಾಗುತ್ತೇನೆಂಬ ಸಚಿವ ಆರ್​.ವಿ.ದೇಶಪಾಂಡೆ ಅವರ ಹೇಳಿಕೆಯಿಂದ ಸಂತೋಷವಾಗಿದೆ. ಅವರು ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದಾರೆ. ಅವರೂ ಪಕ್ಷಕ್ಕೆ ದುಡಿದಿದ್ದಾರೆ. ಅವರೂ ಸಿಎಂ ಯಾಕಾಗಬಾರದು ಎಂದು ಪತ್ರಕರ್ತರನ್ನು ಡಿಸಿಎಂ ಪ್ರಶ್ನಿಸಿದರು.