ಕೊಡಗಿನ ಕವಿ, ಅರ್ಜುನ್ ಮೌರ್ಯ ಅವರ ನಾನು ನನ್ನ ವ್ಯಾಖ್ಯಾನ ಕವನ ಸಂಕಲನವನ್ನು ಅಹಿಂದ ಹೋರಾಟಗಾರ ಜವರಪ್ಪ ಬಿಡುಗಡೆ ಮಾಡಿದರು. ಗಿರೀಶ್, ಸೋಸಲೆ ಮಹೇಶ್, ಶಿವಪ್ರಸಾದ್, ಲತಾಮಣಿ ಇದ್ದರು. 
ಜಿಲ್ಲೆ

‘ನಾನು ನನ್ನ ವ್ಯಾಖ್ಯಾನ’ ಕವನ ಸಂಕಲನ ಬಿಡಗಡೆ

ವಿರಾಜಪೇಟೆ: ಮೈಸೂರಿನ ಕಿರು ಕಲಾಮಂದಿರದಲ್ಲಿ ಚಾರ್ವಾಕ ಸಂಸ್ಥೆಯಿಂದ ಏರ್ಪಡಿಸಲಾಗಿದ್ದ ಸಂವಿಧಾನ ಉಳಿಸುವಲ್ಲಿ ಎಡಗೈ-ಬಲಗೈಗಳ ಒಗ್ಗೂಡುವಿಕೆಯ ಅನಿವಾರ್ಯತೆ ಎಂಬ ಒಂದು ದಿನದ ರಾಜ್ಯ ಮಟ್ಟದ ಶಿಬಿರದಲ್ಲಿ ಕೊಡಗಿನ ಕವಿ, ಕೊಡಗು ಜಿಲ್ಲಾ ದಸಾಪ ಅಧ್ಯಕ್ಷರೂ ಆದ ಅರ್ಜುನ್ ಮೌರ್ಯ ಅವರ ಕೃತಿ ನಾನು ನನ್ನ ವ್ಯಾಖ್ಯಾನ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಅಹಿಂದ ಹೋರಾಟಗಾರ ಜವರಪ್ಪ ಕೃತಿ ಬಿಡುಗಡೆ ಮಾಡಿದರು. ಚಲನಚಿತ್ರ ನಿರ್ದೇಶಕ ಗಿರೀಶ್ ಮಾಚಳ್ಳಿ, ಹೋರಾಟಗಾರರಾದ ಶಿವಪ್ರಸಾದ್, ಸಾಮಾಜಿಕ ಹೋರಾಟಗಾರ ಸೋಸಲೆ ಮಹೇಶ್, ದ್ರಾವಿಡ ಸಂಘದ ಲತಾಮಣಿ ಪಾಲ್ಗೊಂಡಿದ್ದರು.

ದಲಿತ ಬಂಡಾಯ ಬರಹಗಾರ ಕೃಷ್ಣಮೂರ್ತಿ ಚಮರಂ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿದರು.
ಗಾಯಕ ಸಿದ್ದೇಶ್ ಹಾಗೂ ತಂಡದಿಂದ ಅರ್ಜುನ್ ಮೌರ್ಯ ರಚಿಸಿದ ಕವನಗಳಿಗೆ ರಾಗ ಸಂಯೋಜಿಸಿ ಹಾಡಿದರು.