ಜಿಲ್ಲೆ

ನಾನೂ ಸಚಿವ ಸ್ಥಾನದ ಆಕಾಂಕ್ಷಿ!

ಬಂಗಾರಪೇಟೆ: ಅತಿ ಹೆಚ್ಚು ಬಲಗೈ ಸಮುದಾಯ ಇರುವ ಕೋಲಾರ ಜಿಲ್ಲೆಯಲ್ಲಿ ಅತ್ಯಂತ ಹಿರಿಯ ಶಾಸಕನಾಗಿದ್ದು, ನಾನೂ ಸಚಿವ ಆಕಾಂಕ್ಷಿಯಾಗಿದ್ದೇನೆ ಎಂದು ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಇಂಗಿನ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ಎಸ್​.ಎನ್​ ಸಿಟಿಯ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಗಟ್ಟಿಯಾಗಿ ಇರುವವರೆಗೂ ಅವರು ರಾಜ್ಯಕ್ಕೆ ಬೇಕು. ಅವರ ಸೇವೆಯೂ ಬೇಕಾಗಿದೆ. ಸಿದ್ದರಾಮಯ್ಯ ಜೀವನ ಪರ್ಯಂತ ನಿವೃತ್ತಿ ಮಾತಿಲ್ಲ ರಾಜಕೀಯವಾಗಿ ಇದ್ದೇ ಇರ್ತಾರೆ ಎಂದರು.

ಎರಡುವರೆ ವರ್ಷದ ನಂತರ ಅಧಿಕಾರ ಹಸ್ತಾಂತರವಾಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ನೀಡಿದ ಅವರು ನಮ್ಮಲ್ಲಿ ಈ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ ಹೈಕಮಾಂಡ್​ ಮಾತಿಗೆ ಬದ್ಧರಾಗಿರುತ್ತೇವೆ. ಸದ್ಯಕ್ಕೆ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿ ಇಲ್ಲ ಕುರ್ಚಿ ಬಿಡಿ ಅಂತ ಯಾರು ಹೇಳುತ್ತಿಲ್ಲ. ಆದ್ರೆ ವಿರೋಧ ಪಕ್ಷದವರ ಬೊಬ್ಬೆ ಬಿಟ್ಟರೆ, ನಮ್ಮ ಪಕ್ಷದಲ್ಲಿ ಯಾರು ಬಿಡಿ ಅಂತ ಹೇಳುತ್ತಿಲ್ಲ ಎಂದರು.

ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್​ ಸ್ಥಾನ 138 ಆಗಿದೆ, ಬಲ ಜಾಸ್ತಿ ಆಗಿದೆ. ಅಧಿಕಾರ ಪ್ರಸ್ತಾಪ ಪಬ್ಲಿಕ್​ನಲ್ಲಿ ಆಗಿಲ್ಲ. ನಮ್ಮಲ್ಲೂ ಆಗಿಲ್ಲ ಸಿಎಂ, ಡಿಸಿಎಂ, ಇಬ್ಬರ ನಡುವೆ ಒಪ್ಪಂದಕ್ಕೆ ಬಂದಿರಬಹುದು ಆದ್ರೆ ಇದರ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲ ಎಂದರು.

ಬೆಳಗಾವಿ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಗೆ ಪ್ರತಿಕ್ರಿಯಸಿದ ಅವರು ಸದ್ಯಕ್ಕೆ ಸಿಎಂ ಮತ್ತು ಸಚಿವ ಸಂಪುಟ ಆಗುವುದಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ, ಅಭಿವೃದ್ಧಿ ಮಾಡಲು ನನಗೆ ಅವಕಾಶ ಕೊಟ್ಟರೆ ಮಾಡುವೆ. ಆದರೆ ಸಚಿವ ಸ್ಥಾನಕ್ಕೆ ಒತ್ತಾಯ ಮಾಡಲ್ಲ. ಆದರೆ ಇನ್ನೂ ಎರಡುವರೆ ವರ್ಷದ ನಂತರ ಸಚಿವ ಸ್ಥಾನ ನೀಡುವ ಭರವಸೆ ರ್ಖಗೆ ಅವರು ನೀಡಿದ್ದಾರೆ. ಸಿಎಂ ಡಿಸಿಎಂ ಅವರು ಭರವಸೆ ನೀಡಿದ್ದಾರೆ. ಜವಾಬ್ದಾರಿ ಕೊಡುತ್ತಾರೆ ಎಂಬ ವಿಶ್ವಾಸವಿದೆ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ ಏಪ್ರಿಲ್​ನಲ್ಲಿ ಆಗಬಹುದು ಎಂದಿದ್ದಾರೆ.