ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಹುಂಡೈ ಮೆಗಾ ಎಕ್ಸ್‌ಚೇಂಜ್ ಮತ್ತು ಬಳಸಿದ ಕಾರು ಮೇಳ ನಡೆಯುತ್ತಿದೆ.
ನಗರದ ಮಹಾರಾಜ ಮೈದಾನದ ಎದರು ಅರಸು ಬೋರ್ಡಿಂಗ್ ಆವರಣದಲ್ಲಿ 3 ದಿನಗಳ ಕಾಲ ಆಯೋಜಿಸಿರುವ ಹುಂಡೈ ಮೆಗಾ ಎಕ್ಸ್‌ಚೇಂಜ್ ಮತ್ತು ಕಾರು ಮೇಳವನ್ನು ಗುರುವಾರ(ಅ.13) ಕರ್ನಾಟಕದ ಹುಂಡೈ ಮಾರ್ಕೆಟಿಂಗ್ ಮ್ಯಾನೇಜರ್ ಬೆನೆಟ್, ಅದ್ವೈತ್ ಹುಂಡೈ ಸೇಲ್ಸ್ ಹೆಡ್ ಪ್ರಮೋದ್ ಕೆ.ಸಿ., ಸ್ಟಾರ್ ಹುಂಡೈ ಮಾರಾಟ ಮುಖ್ಯಸ್ಥ ನಾಗೇಶ್ ಎಂ.ಬಿ. ಉದ್ಘಾಟಿಸಿದರು.
ಈ ಮೇಳ ಅ.15ರ ವರೆಗೆ ನಡೆಯಲಿದೆ. ಹಲವು ಮಾದರಿಯ ಹೊಸ ಕಾರುಗಳನ್ನೂ ಪ್ರದರ್ಶನಕ್ಕಿಡಲಾಗಿದ್ದು, ಟೆಸ್ಟ್ ಡ್ರೈ ಮಾಡಲು ಗ್ರಾಹಕರಿಗೆ ಅವಕಾಶವಿದೆ. ಹಳೇ ಕಾರನ್ನು ಎಕ್ಸ್‌ಚೇಂಜ್ ಮಾಡಿ ಹೊಸ ಕಾರು ಖರೀದಿಸಲು ಸುವರ್ಣಾವಕಾಶವಿದೆ. ವಿಶೇಷವಾಗಿ CNG ಕಾರ್ ಮತ್ತು 30ಕ್ಕೂ ಹೆಚ್ಚು ಬಳಿಸಿದ ಗುಣಮಟ್ಟದ ಕಾರುಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.