ಸಾಂದರ್ಭಿಕ ಚಿತ್ರ 
ಜಿಲ್ಲೆ

ಹೈದರಾಬಾದ್ - ಮಂಗಳೂರು ವಿಶೇಷ ರೈಲು ಜುಲೈ ಅಂತ್ಯದವರೆಗೆ ವಿಸ್ತರಣೆ

ಮಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಹೈದರಾಬಾದ್ - ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಸೆಂಟ್ರಲ್ - ಹೈದರಾಬಾದ್ ನಡುವಿನ ವಾರಾಂತ್ಯ ವಿಶೇಷ ರೈಲುಗಳ ಸಂಚಾರವನ್ನು ಇನ್ನೂ ಐದು ಟ್ರಿಪ್‌ಗಳವರೆಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 07097 ಹೈದರಾಬಾದ್‌ಮಂಗಳೂರು ಸೆಂಟ್ರಲ್ ವಿಶೇಷ ರೈಲು ಜುಲೈ 1ರಿಂದ ಜುಲೈ 29 ರ ವರೆಗೆ ಪ್ರತಿ ಬುಧವಾರ ಸಂಚರಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 07098 ಮಂಗಳೂರು ಸೆಂಟ್ರಲ್ - ಹೈದರಾಬಾದ್ ವಿಶೇಷ ರೈಲು ಜುಲೈ 2ರಿಂದ ಜುಲೈ 30 ರವರೆಗೆ ಪ್ರತಿ ಗುರುವಾರ ಸಂಚರಿಸಲಿದೆ. ಎರಡೂ ದಿಕ್ಕುಗಳಲ್ಲಿ ತಲಾ ಐದು ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸಲಾಗುತ್ತದೆ.
ಈ ವಿಶೇಷ ರೈಲುಗಳ ವೇಳಾಪಟ್ಟಿ ಹಾಗೂ ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.