ಹೂವಿನಹಿಪ್ಪರಗಿ: ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಮೂಲ ಸೌಕರ್ಯದ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಶಾಸಕರು ಕೈಗೆತ್ತಿಕೊಂಡಿದ್ದು, ಇನ್ನೂ ಹಲವಾರು ಕಾಮಗಾರಿಗಳ ಅನುಷ್ಠಾನವಾಗಬೇಕಿದೆ. ರಾಜ್ಯದಲ್ಲೇ ದೇವರಹಿಪ್ಪರಗಿ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಲು ಸರ್ವತೋಮುಕ ಅಭಿವೃದ್ಧಿಗೆ ಶಾಸಕ ಸೋಮನಗೌಡ ಪಾಟೀಲ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಶಾಸಕರ ಸಹೋದರ ಸಾಹೇಬಗೌಡ ಪಾಟೀಲ(ಸಾಸನೂರ) ಹೇಳಿದರು.
ಸಮೀಪದ ಬ್ಯಾಕೋಡ ಗ್ರಾಮದಲ್ಲಿ 2019-20ನೇ ಸಾಲಿನ ಎಸ್‌ಡಿಪಿ-4705 ಅಡಿಯಲ್ಲಿ 3 ಕಿಮೀವರೆಗೆ ಬ್ಯಾಕೋಡ - ಕುದರಿಸಾಲವಾಡಗಿ ಡಾಂಬರ್ ರಸ್ತೆ ಸುಧಾರಣೆ ಕಾಮಗಾರಿ ಹಾಗೂ ಭೂಸೇನಾ ನಿಗಮ ವತಿಯಿಂದ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು 10 ಲಕ್ಷ ರೂ. ವೆಚ್ಚದಲ್ಲಿ ಡಾ. ಬಾಬು ಜಗಜೀವನ್‌ರಾಮ್ ಭವನದ ಕಟ್ಟಡ ಕಾಮಗಾರಿ ಸೇರಿ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಮಾಜಿ ತಾಪಂ ಅಧ್ಯಕ್ಷ ಬಸನಗೌಡ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ ರುದ್ರುಗೌಡ ಬಿರಾದಾರ, ಗಿರೆಪ್ಪಾ ಹೆಬ್ಬಾಳ, ಶಿವಪ್ಪ ಜಾಯವಾಡಗಿ, ರಾಮನಗೌಡ ನಾವದಗಿ, ಮೋಹನಗೌಡ ಹಿರೇಗೌಡರ, ಮಲ್ಲಣ್ಣ ಲಚ್ಯಾಣ, ಮಲ್ಲನಗೌಡ ನಾಡಗೌಡ, ಬಸನಗೌಡ ಹಳೆಮನಿ, ಹಾಜಿಮಲಂಗ ಚಪ್ಪರಬಂದ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಬಿ. ಸೊನ್ನದ, ಕೃಷ್ಣಾ ಕಾಡಾದ ಎಇಇ ಕೆ.ಎಸ್. ಪತ್ತಾರ, ಎಇ, ಎಸ್.ಎ. ಬಿರಾದಾರ, ಭೂಸೇನಾ ಇಲಾಖೆಯ ಎಇ ಶಿವಾನಂದ ಮಡಿವಾಳರ, ಗುತ್ತಿಗೆದಾರ ಎನ್.ಬಿ. ದೇಸಾಯಿ ಮತ್ತಿತರರಿದ್ದರು.