ಜಿಲ್ಲೆ

ಕಲುಷಿತ ನೀರು ಸೇವಿಸಿ ಹತ್ತು ಜನರು ಅಸ್ತವ್ಯಸ್ತ

ಮಂಜುನಾಥ

ಹೂವಿನಹಡಗಲಿ : ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಹತ್ತು ಜನರಿಗೆ ವಾಂತಿ ಬೇದಿ ಕಾಣಿಸಿಕೊಂಡು ಅಸ್ತವ್ಯಸ್ತತಗೊಂಡ ಘಟನೆ ಸೋಮವಾರ ನಡೆದಿದೆ.

ಗ್ರಾಪಂ ನಿಂದ ಗ್ರಾಮದ ಎಲ್ಲಾ ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು.

ಸೋಮವಾರ ಬೆಳಿಗ್ಹೆ ಕುಡಿಯುವ ನೀರನ್ನು ಸೇವಿಸಿದ ಮೂರನೇ ವಾರ್ಡಿನ ಬಹುತೇಕರಿಗೆ ವಾಂತಿ ಹಾಗೂ ಬೇದಿ ಆರಂಭವಾಗಿದೆ.‌ ವಿಷಯ ತಿಳಿಸಿ ತಕ್ಷಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಅಂಬೇಡ್ಕರ್ ಸ್ಥಳಕ್ಕೆ ಆಗಮಿಸಿ ನೀರನ್ನು ಸಂಗ್ರಹಿಸಿ ತಪಾಸಣೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಸ್ತವ್ಯಸ್ತತಗೊಂಡ ಜನರಿಗೆ ಚಿಕಿತ್ಸೆ ನೀಡಿದರು. ಮುಂಜಾಗೃತಾ ಕ್ರಮವಾಗಿ ಗ್ರಾಮದ ಎಲ್ಲಾ ಭಾಗಗಳಿಗೂ ನೀರು ಹರಿಸದಂತೆ ಸೂಚನೆ ನೀಡಲಾಗಿದೆ. ಪಿಡಿಒ ಮಹಮ್ಮದ ರಫಿ ಇತರರಿದ್ದರು.