ಜಿಲ್ಲೆ

ನದಿಗೆ ಹಾರಿ ವ್ಯಾಪಾರಿ ಆತ್ಮಹತ್ಯೆ

ಹೂವಿನಹಡಗಲಿ: ಚರ್ಮರೋಗ ಕಾಯಿಲೆಯಿಂದ ಬೇಸತ್ತು ಪಾನಿಪೂರಿ ವ್ಯಾಪಾರಿ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ದೇವರಚಿಕ್ಕಹಳ್ಳಿ ನಿವಾಸಿ ಮಾರುತಿ ಆರ್. (58) ಆತ್ಮಹತ್ಯೆ ಮಾಡಿಕೊಂಡಾತ. ಜು.16 ರಂದು ಬೆಂಗಳೂರಿನ ಮನೆಯಿಂದ ದಾವಣಗೆರೆ ಸಮೀಪದ ಆನಗೋಡು ಗ್ರಾಮದ ತನ್ನ ಮಗಳ ಮನೆಗೆ ತೆರಳುವುದಾಗಿ ತಿಳಿಸಿ ಬಂದಿದ್ದಾರೆ. ಮೃತನು ತನ್ನ ಆಧಾರ್ ಮತ್ತು ಚಿಕಿತ್ಸೆ ದಾಖಲಾತಿಗಳನ್ನು ಹರಿಹರದ ತುಂಗಭದ್ರಾ ಸೇತುವೆ ಮೇಲೆ ಇರಿಸಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವು ತಾಲೂಕಿನ ಹಿರೇಬನ್ನಿಮಟ್ಟಿ ಗ್ರಾಮದ ನದಿಯಲ್ಲಿ ಸೋಮವಾರ ದೊರೆತಿದೆ. ಮೃತರ ಮಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.