ಹೂವಿನಹಡಗಲಿ: ತಾಲೂಕಿನಾದ್ಯಂತ ಬುಧವಾರದಿಂದ ಗುರುವಾರ ಸಂಜೆವರೆಗೆ ಮಳೆ ಸುರಿಯಿತು. ನಿರಂತರ ಮಳೆಯಿಂದಾಗಿ ಮಾನ್ಯರಮಸಲವಾಡ, ಕಾಗನೂರು ಗ್ರಾಮದಲ್ಲಿ ತಲಾ ಒಂದು ಮನೆ ಹಾನಿಗೀಡಾಗಿವೆ. ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ ಗುಡುಗು ಸಹಿತ ಬಾರಿ ಮಳೆ ಸುರಿದ ಕಾರಣ ಪಟ್ಟಣದಲ್ಲಿ ರಸ್ತೆಗಳ ಮೇಲೆ ನೀರು ಹರಿದು ವಾಹನ ಸವಾರರು ಪರದಾಡಿದರು. ರಸ್ತೆ ಮೇಲೆ ಹಾಕಿದ್ದ ಮೆಕ್ಕಜೋಳಗಳು ನೀರಿನಲ್ಲಿ ತೊಯ್ದು ರೈತರು ಸಂಕಷ್ಟಕ್ಕೀಡಾದರು. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡಿದರು.
ಇದನ್ನೂ ಓದಿ: ಕರಾವಳಿಯಲ್ಲಿ ಉತ್ತಮ ಮಳೆ ಸಾಧ್ಯತೆ