ಹೂವಿನಹಡಗಲಿ: ತಾಲೂಕಿನ ನರೇಗಾ ಕೂಲಿ ಪಾವತಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿದ ವ್ಯಕ್ತಿಗೆ ಮಹಿಳಾ ಕಾರ್ಮಿಕರು ರಾಖಿ ಕಟ್ಟಿ ವಿನೂತನವಾಗಿ ಬುಧವಾರ ಪ್ರತಿಭಟನೆ ನಡೆಸಿದರು.
ಕೆ.ಅಯ್ಯನಹಳ್ಳಿ, ನವಲಿ, ಸೋಗಿ ಗ್ರಾಮಗಳ ನರೇಗಾ ಕಾರ್ಮಿಕರಿಗೆ ಮೂರು ತಿಂಗಳಿಂದ ಹಣ ಪಾವತಿಸದ ಕಾರಣ ಕುಟುಂಬಗಳ ನಿರ್ವಹಣೆ ಕಷ್ಟವಾಗಿದೆ. ನಮಗೆ ನೀಡಬೇಕಿರುವ ಭತ್ಯೆಯೊಂದಿಗೆ ಕೂಲಿ ಹಣ ತಕ್ಷಣ ಪಾವತಿಸಬೇಕು. ವರ್ಷಕ್ಕೆ 200 ದಿನಗಳ ಕಾಲ ಕೆಲಸ ನೀಡಬೇಕು. ಕೂಲಿ ಮೊತ್ತವನ್ನು 600 ರೂ.ಗೆ ಹೆಚ್ಚಿಸಬೇಕು ಎಂದು ಗ್ರಾಕೂಸ ಪದಾಧಿಕಾರಿಗಳು ಒತ್ತಾಯಿಸಿದರು.
ಸಂಘಟನೆ ಸದಸ್ಯರಾದ ಜಗದೀಶ, ಫಾತಿಮಾ, ಈರಮ್ಮ, ಶಶಿಕಲಾ, ಇಲಾಜ್, ಲಕ್ಷ್ಮವ್ವ, ಪ್ರೇಮಕ್ಕ, ಸೂರ್ಯಪ್ಪ, ದ್ಯಾಮಪ್ಪ, ಕುಮಾರ, ದೇವಪ್ಪ, ಅಶೋಕ, ಮಹಾಬಲೇಶ, ಶಬ್ಬೀರ್ ಬಾಷಾ, ನೀಲಪ್ಪ, ಹನಮಂತಪ್ಪ, ಪರಶುರಾಮ ಇತರರಿದ್ದರು.