ಹೂವಿನಹಡಗಲಿ: ಪಟ್ಟಣದ ಗ್ರಾಮ ದೇವತೆ ಊರಮ್ಮ ದೇವಿಗೆ ಮಂಗಳವಾರ ಹಿಂದು-ಮುಸ್ಲಿಂ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ, ಉಡಿ ತುಂಬಿದರು.
ದೇವಿ ಮೂರ್ತಿಯನ್ನು ವಿವಿಧ ಆಭರಣಗಳಿಂದ ಸಿಂಗರಿಸಿ, ಸಾಂಪ್ರದಾಯದಂತೆ ದೈವಸ್ಥರು ಕಾರ್ಯಕ್ರಮ ನೆರವೇರಿಸಿದ ನಂತರ ಪಟ್ಟಣದ ಮಹಿಳೆಯರು ಉಡಿ ತುಂಬಿದರು. ಈ ವೇಳೆ ಮುಸ್ಲಿಂ ಮಹಿಳೆಯರು ಸಾಲಿನಲ್ಲಿ ನಿಂತು ದೇವಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಕೈಂಕರ್ಯ ರಾತ್ರಿವರೆಗೂ ಮುಂದುವರಿಯಿತು.
ಬೆಳಗ್ಗೆಯಿಂದ ಅಪಾರ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು. ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ವಿ.ಸಿ.ಪಾಟೀಲ, ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ, ಶಿಲ್ಪಿ ಹಂಸಾನಂದಾಚಾರ್ಯ, ಸದಸ್ಯರಾದ ಹನುಮಂತಪ್ಪ, ಪ್ರಕಾಶ್, ಮುರುಳಿ, ದೈವಸ್ಥರು, ಇತರರಿದ್ದರು.