ಹೂವಿನಹಡಗಲಿ ಪುರಸಭೆಯ ಅಧ್ಯಕ್ಷೆಯಾಗಿ ಬಿಜೆಪಿಯ ಜಮಲಾಬಿ ಹಾಗೂ ಉಪಾಧ್ಯಕ್ಷರಾಗಿ ಸೊಪ್ಪಿನ ಮಂಜುನಾಥ ಆಯ್ಕೆಯಾದರು. ಶಾಸಕ ಕೃಷ್ಣನಾಯ್ಕ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಈಟಿ ಲಿಂಗರಾಜ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ, ಪುರಸಭೆ ಸದಸ್ಯರಾದ ಎಸ್.ತಿಮ್ಮಣ್ಣ, ಮಂಜುನಾಥ ಜೆ, ಚಂದ್ರನಾಯ್ಕ, ವಿಶಾಲಾಕ್ಷಿ, ಐಗೋಳ್ ಸುರೇಶ, ಶಾಂತಮ್ಮ, ದುರುಗವ್ವ ಇತರಿದ್ದರು. 
ಜಿಲ್ಲೆ

ಹೂವಿನಹಡಗಲಿ ಪುರಸಭೆ ಬಿಜೆಪಿ ತೆಕ್ಕೆಗೆ - ಘಂಟಿ ಜಮಲಾಬಿ ಅಧ್ಯಕ್ಷೆ, ಸೊಪ್ಪಿನ ಮಂಜುನಾಥ ಉಪಾಧ್ಯಕ್ಷ

ಶ್ರೀನಾಥ

ಹೂವಿನಹಡಗಲಿ: ಪಟ್ಟಣದ ಪುರಸಭೆ ಅಧ್ಯಕ್ಷೆಯಾಗಿ ಜಮಲಾಬಿ ಹಾಗೂ ಉಪಾಧ್ಯಕ್ಷರಾಗಿ ಸೊಪ್ಪಿನ ಮಂಜುನಾಥ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ಈ ಮೂಲಕ ಪುರಸಭೆ ಆಡಳಿತ ಮೊದಲ ಬಾರಿಗೆ ಬಿಜೆಪಿ ಪಾಲಾಗಿದೆ.

ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಏಳು ಜನ ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿ, ತಹಸೀಲ್ದಾರ್ ಸಂತೋಷ್ ಕುಮಾರ್ ಆಯ್ಕೆ ಪ್ರಕಟಿಸಿದರು. ಅಧ್ಯಕ್ಷೆ ಘಂಟಿ ಜಮಲಾಬಿ ಮಾತನಾಡಿ, ನಾನು ಕಾಂಗ್ರೆಸ್‌ನಿಂದ ಪುರಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದೆ. ಆದರೆ, ಮತದಾರರಿಗೆ ನ್ಯಾಯ ಒದಗಿಸಲಾಗದ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು.

ಶಾಸಕ ಕೃಷ್ಣನಾಯ್ಕ ಮಾತನಾಡಿ, ಕಾಂಗ್ರೆಸ್ ದುರಾಡಳಿತದಿಂದ ಬೇಸರಗೊಂಡು 10 ಜನ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಇತರರಿದ್ದರು.