ಹೂವಿನಹಡಗಲಿಯ ಶಾಸ್ತ್ರೀ ವೃತ್ತದಲ್ಲಿ ಆರೋಗ್ಯ ಇಲಾಖೆ, ನ್ಯಾಯಾಂಗ ಇಲಾಖೆಯಿಂದ ಕುಷ್ಠ ರೋಗ ಜಾಗೃತಿ ಅಭಿಯಾನ ಗುರುವಾರ ನಡೆಯಿತು. 
ಜಿಲ್ಲೆ

ಕುಷ್ಠ ರೋಗದ ಜಾಗೃತಿ ಮೂಡಿಸಲು ಜೆಎಂಎಫ್‌ಸಿ ನ್ಯಾಯಾಧೀಶ ವೀರೇಶ ಕುಮಾರ್ ಸಿ.ಕೆ. ಸಲಹೆ

ಹೂವಿನಹಡಗಲಿ: ಕುಷ್ಠ ರೋಗದ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ವೀರೇಶ ಕುಮಾರ್ ಸಿ.ಕೆ. ಹೇಳಿದರು.

ಪಟ್ಟಣದ ಶಾಸ್ತ್ರೀ ವೃತ್ತದಲ್ಲಿ ಆರೋಗ್ಯ ಇಲಾಖೆ, ನ್ಯಾಯಾಂಗ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಕುಷ್ಠ ರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಷ್ಠ ರೋಗಿಗಳ ಶೋಷಣೆಯಾಗದಂತೆ ನೋಡೊಕೊಳ್ಳಬೇಕಿದೆ. ಎಲ್ಲರೂ ಒಟ್ಟಾಗಿ ಈ ಪಿಡುಗನ್ನು ಹೋಗಲಾಡಿಸಬೇಕು ಎಂದರು.

ತಹಸೀಲ್ದಾರ್ ನಟರಾಜ್, ವಕೀಲ ಅಟವಾಳಗಿ ಕೊಟ್ರೇಶ, ತಾಲೂಕು ವೈಧ್ಯಾಧಿಕಾರಿ ವಿನೋದ ಕುಮಾರ್, ಕುಷ್ಠರೋಗ ಮೇಲ್ವಿಚಾರಕ ಬಸವರಾಜ್, ಸಂಯೋಜಕ ಬೀರಬ್ಬಿ ಮಹೇಶ, ಹಿರಿಯ ಆರೋಗ್ಯ ಸಹಾಯಕರಾದ ರಾಧ, ನೇತ್ರಾವತಿ, ಶಿವಕುಮಾರ್, ರಾಜೇಂದ್ರ, ಸರ್ಕಾರಿ ಅಭಿಯೋಜಕ ಕೆ.ಅಜ್ಜಯ್ಯ ಇತರರು ಇದ್ದರು.