ಹೂವಿನಹಡಗಲಿ: ತಾಲೂಕಿನ ಬ್ಯಾಲಹುಣಸಿ ಗ್ರಾಮದಲ್ಲಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಹಿರೇಹಡಗಲಿ ಪೊಲೀಸರು ಸೋಮವಾರ ದಾಳಿ ನಡೆಸಿ, ಎರಡು ಕಬ್ಬಿಣದ ತೆಪ್ಪಗಳನ್ನು ವಶಕ್ಕೆ ಪಡೆದರು.
ಬ್ಯಾಲಹುಣಸಿ ಗ್ರಾಮದಲ್ಲಿ ಹರಿಯುತ್ತಿರುವ ನದಿಯಲ್ಲಿ ಕೊಪ್ಪರಿಗೆ ರೀತಿಯಲ್ಲಿರುವ ಎರಡು ಕಬ್ಬಿಣದ ತೆಪ್ಪಗಳಲ್ಲಿ ಪರವಾನಗಿ ಇಲ್ಲದೆ ಮರಳು ದೋಚಿ ಸಾಗಿಸುತ್ತಿದ್ದರು.
ಇದನ್ನೂ ಓದಿ: ಅಕ್ರಮ ಮರಳುಗಾರಿಕೆ 10 ಲೋಡ್ ಮರಳು ಸಹಿತ ಇಬ್ಬರ ಬಂಧನ
ಈ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮಹಾಂತೇಶ್ ಕೆ, ಹಾಗೂ ಸಿಪಿಐ ಸುಧೀರ್ ಕುಮಾರ್ ಬೆಂಕಿ ಅವರ ಮಾರ್ಗದರ್ಶದ ಹಿರೇಹಡಗಲಿ ಪಿಎಸ್‌ಐ ಮಾರುತಿ ಎಸ್.ವಿ. ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಪೊಲೀಸರು ಬರುವ ಸೂಚನೆ ಸಿಕ್ಕ ಕೂಡಲೇ ಖದೀಮರು ತೆಪ್ಪಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಕುರಿತು ಹಾವೇರಿ ಜಿಲ್ಲೆ ಮೇವುಂಡಿ ಗ್ರಾಮದ ನಿಂಗಪ್ಪ ಚಿಕ್ಕರಾಯರ, ಗೊರವರ ಗುಡ್ಡಪ್ಪ ಎಂಬುವವರ ವಿರುದ್ಧ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.