ಹೂವಿನಹಡಗಲಿ ತಾಲೂಕಿನ ಹಗರನೂರು ಬಳಿ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿ ಹಿರೇಹಡಗಲಿ ಠಾಣೆ ಸಿಬ್ಬಂದಿ ಮಣ್ಣು ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚಿದರು. ಪಿಎಸ್‌ಐ ಭರತ್‌ಪ್ರಕಾಶ್ ರೆಡ್ಡಿ, ಎಎಸ್‌ಐ ಸಿದ್ದಪ್ಪ, ಸಿಬ್ಬಂದಿ ಆನಂದ, ನಾಗರಾಜ, ರವಿಚಂದ್ರ ಇತರರಿದ್ದರು.  
ಜಿಲ್ಲೆ

ರಸ್ತೆ ಗುಂಡಿ ಮುಚ್ಚಿದ ಪೊಲೀಸರು

ಶ್ರೀನಾಥ

ಹೂವಿನಹಡಗಲಿ: ಹಗರನೂರು ಗ್ರಾಮದ ಸಮೀಪ ಹದಗೆಟ್ಟ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿ ಹಿರೇಹಡಗಲಿ ಠಾಣೆಯ ಸಿಬ್ಬಂದಿ ಭಾನುವಾರ ಮಣ್ಣು ಹಾಕಿ ದುರಸ್ತಿಗೊಳಿಸಿದರು.

ನಿರಂತರವಾಗಿ ಮಳೆ ಸುರಿದ ಕಾರಣ ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದವು. ನಿತ್ಯ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಪಿಎಸ್‌ಐ ಭರತ್ ಪ್ರಕಾಶ ರೆಡ್ಡಿ ಠಾಣೆಯ ಸಿಬ್ಬಂದಿ ಹಾಗೂ ಗ್ರಾಮದ ಪ್ರಮುಖರೊಂದಿಗೆ ಟ್ರಾೃಕ್ಟರ್ ಮೂಲಕ ಮಣ್ಣು ತರಿಸಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.

ಎಎಸ್‌ಐ ಸಿದ್ದಪ್ಪ, ಸಿಬ್ಬಂದಿ ನಾಗರಾಜ, ಶ್ರೀಶೈಲ, ಆನಂದ, ಚನ್ನಬಸವ, ರವಿಚಂದ್ರ, ಶಿವಕುಮಾರ್, ಹಾಲೇಶ್‌ನಾಯ್ಕ, ಗ್ರಾಮದ ಪ್ರಮುಖರಾದ ಚರಣ್ ಗುಂಡಿ, ಬಂದ್ರಕಳ್ಳಿ ಕೋಟೆಪ್ಪ, ರುದ್ರಾನಾಯ್ಕ, ಸೋಮಯ್ಯ ಇತರರಿದ್ದರು.