ಹೂವಿನಹಡಗಲಿಯ ಗವಿಮಠದಲ್ಲಿ ಮಾಸಿಕ 201ನೇ ಶಿವಾನುಭವ ಕಾರ್ಯಕ್ರಮವನ್ನು ಗಂಗಾವತಿಯ ಉದ್ಯಮಿ ರೂಪಾ ಕೊಟ್ರಪ್ಪ ಉದ್ಘಾಟಿಸಿದರು. ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಉಪನ್ಯಾಸಕ ವಾಸುದೇವ ಕರಣಂ, ಗೃಹರಕ್ಷಕ ದಳದ ತಾಲೂಕು ಅಧಿಕಾರಿ ರಾಜ್‌ಪೀರ್, ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಉಪನ್ಯಾಸಕರಾದ ಪಿ.ಎಂ.ಬಸವಲಿಂಗಯ್ಯ, ಚನ್ನಬಸಯ್ಯ ಇತರರಿದ್ದರು. 
ಜಿಲ್ಲೆ

ಪರಿಶುದ್ಧ ಜೀವನಕ್ಕೆ ವಚನ ಸಾಹಿತ್ಯ ಸಹಕಾರಿ - ಉಪನ್ಯಾಸಕ ವಾಸುದೇವ ಕರಣಂ ಅಭಿಮತ

ಹೂವಿನಹಡಗಲಿ: ಆಲೋಚನಾ ಮತ್ತು ಅಭಿವ್ಯಕ್ತಿ ಸ್ವಾತಂತ್ರೃ ವೃದ್ಧಿಸಲು ಸಾಹಿತ್ಯ ಅಧ್ಯಯನದ ಅವಶ್ಯ ಇದೆ ಎಂದು ಉಪನ್ಯಾಸಕ ವಾಸುದೇವ ಕರಣಂ ಹೇಳಿದರು.

ಪಟ್ಟಣದ ಗವಿಮಠದಲ್ಲಿ ಬುಧವಾರ ನಡೆದ ಮಾಸಿಕ 201 ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನಗಳ ಸಾಹಿತ್ಯ ನಮಗೆ ಧರ್ಮ, ನೀತಿ, ತತ್ವ, ಅಧ್ಯಾತ್ಮ, ಸಮಾಜ, ವಿಜ್ಞಾನ, ಮನೋವಿಜ್ಞಾನ, ರಾಜಕೀಯ ಹೀಗೆ ಪರಿಶುದ್ಧ ಜೀವನಕ್ಕೆ ಬೇಕಾದ ಎಲ್ಲ ಸಂಗತಿಗಳನ್ನು ತಿಳಿಸುತ್ತವೆ. ವೇದ, ಉಪನಿಷತ್ತು, ಭಗವದ್ಗೀತೆ ಮತ್ತಿತರ ಧಾರ್ಮಿಕ ಗ್ರಂಥಗಳಲ್ಲಿರುವ ತತ್ವಗಳಿಗಿಂತ ಹೆಚ್ಚಿನ ವಿಚಾರಗಳು ವಚನದಲ್ಲಿ ಅಡಕವಾಗಿದೆ ಎಂದರು.

ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಈ ನಾಡಿನಲ್ಲಿ ಅಕ್ಷರ ಮತ್ತು ಅನ್ನದಾಸೋಹವನ್ನು ಆರಂಭಿಸುವ ಮೂಲಕ ಶರಣರು ಸಮಾಜವನ್ನು ಕಟ್ಟುವ ಕಾಯಕ ಮಾಡಿದ್ದಾರೆ. ಅವರ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.

ಗೃಹರಕ್ಷಕ ದಳದ ತಾಲೂಕು ಅಧಿಕಾರಿ ರಾಜ್‌ಪೀರ್, ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಉಪನ್ಯಾಸಕರಾದ ಪಿ.ಎಂ.ಬಸವಲಿಂಗಯ್ಯ, ಚನ್ನಬಸಯ್ಯ ಇತರರಿದ್ದರು.