ಹೂವಿನಹಡಗಲಿಯಲ್ಲಿ ವಿವಿಧ ರೈತಪರ ಸಂಘಟನೆ ಮುಖಂಡರು ತಹಸೀಲ್ದಾರ್ ಕೆ.ಶರಣಮ್ಮಗೆ ಮನವಿ ಸಲ್ಲಿಸಿದವು. 
ಜಿಲ್ಲೆ

ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಘೋಷಿಸಿ

ಹೂವಿನಹಡಗಲಿ: ಪ್ರಸ್ತುತ ದಿನಗಳಲ್ಲಿ ರಾಜ್ಯದ ರೈತರು ಸಾಲಭಾದೆ, ಬೆಳೆಹಾನಿ, ಜಾನುವಾರುಗಳ ಸಾವುಗಳಿಂದ ನಷ್ಟ ಅನುಭವಿಸಿದ್ದು, ಸರ್ಕಾರ ರೈತರಿಗೆ ಶೀಘ್ರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಮತ್ತು ವಿವಿಧ ರೈತಪರ ಸಂಘಟನೆಗಳು ಬುಧವಾರ ತಹಸೀಲ್ದಾರ್ ಕೆ.ಶರಣಮ್ಮಗೆ ಮನವಿ ಸಲ್ಲಿಸಿದವು.

ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ ಮಾತನಾಡಿ, ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಜಾನುವಾರುಗಳಿಗೆ ವೈರಸ್ ತಗುಲಿ ಮೃತಪಟ್ಟಿವೆ. ಒಂದು ಜೊತೆ ಎತ್ತು ಖರೀದಿಸಬೇಕಾದರೆ 1.10 ಲಕ್ಷ ರೂ. ಬೇಕಾಗುತ್ತದೆ. ಮಳೆಯಿಂದ ಬೆಳೆದ ಬೆಳೆಗಳೆಲ್ಲ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದರು. ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಉಮೇಶ, ಗೌರವಾಧ್ಯಕ್ಷ ಎಂ.ಚನ್ನಬಸಪ್ಪ, ಜಿಲ್ಲಾಧ್ಯಕ್ಷ ಅರಳಳ್ಳಿ ರವೀಂದ್ರ, ತಾಲೂಕು ಅಧ್ಯಕ್ಷ ಎಂ.ಸುರೇಶ, ಕಬ್ಬುಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬೆನ್ನೂರು ಹಾಲೇಶ್, ತಳಕಲ್ಲು ಕೆರೆ ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರಪ್ಪ ಇತರರಿದ್ದರು.