ಹೂವಿನಹಡಗಲಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಲು ಸೇತುವೆ ನಿರ್ಮಿಸಿಲ್ಲವೆಂದು ಆರೋಪಿಸಿ ಮಂಗಳವಾರ ಜೆಸಿಬಿ ಮೂಲಕ ಮಣ್ಣು ಹಾಕಿ ಮುಚ್ಚುತ್ತಿರುವುದು. 
ಜಿಲ್ಲೆ

ಕಾಲುವೆಗಳನ್ನು ಮಣ್ಣು ಹಾಕಿ ಮುಚ್ಚಿಸಿದ ರೈತರು

ಹೂವಿನಹಡಗಲಿ: ತಾಲೂಕಿನ ಮುದೇನೂರು ಗ್ರಾಮದ ರೈತರು ತಮ್ಮ ಭೂಮಿಯಲ್ಲಿ ನಿರ್ಮಿಸಿದ ಕಾಲುವೆಗಳಿಗೆ ಸೇತುವೆ ನಿರ್ಮಿಸಿಲ್ಲವೆಂದು ಆರೋಪಿಸಿ ಮಂಗಳವಾರ ಜೆಸಿಬಿಗಳ ಮೂಲಕ ಮಣ್ಣು ಹಾಕಿ ಮುಚ್ಚಿದರು.

ಪರಿಹಾರ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ಪ್ರಾರಂಭಿಸಿ ಎರಡು ದಿನ ಕಳೆದಿವೆ. ಆದರೆ, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಸಿಂಗಟಾಲೂರು ಏತ ನೀರಾವರಿ ಕಚೇರಿಗೆ ಎಲ್ಲ ರೈತರು ಸೇರಿ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್ ಎಂ ಸಿದ್ದೇಶ್, ಪ್ರಮುಖರಾದ ಸುರೇಶ್ ಹಲಗಿ, ಎನ್‌ಎಂ ಸಿದ್ದೇಶ್, ಹಾಲೇಶ್ ಎಐಕೆಎಸ್‌ನ ಜಿಲ್ಲಾ ಸಂಚಾಲಕ ಹಲಗಿ ಸುರೇಶ್, ಎಐಕೆಎಸ್‌ನ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬೆನ್ನೂರು ಹಾಲೇಶ್ ಇತರರು ಇದ್ದರು.