ಹೂವಿನಹಡಗಲಿ: ಕಾಗನೂರು ಗ್ರಾಮ ಹೊರವಲಯದ ರಸ್ತೆ ತಿರುವಿನಲ್ಲಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸೈನಿಕ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ಕಂದಗಲ್ಲು ಗ್ರಾಮದ ಸೈನಿಕ ಯರಿಮನಿ ಹೇಮಪ್ಪ (40) ಮೃತ. ಹೇಮಪ್ಪ ಬಿಎಸ್‌ಎಫ್‌ನಲ್ಲಿ ಹವಾಲ್ದಾರ್‌ರಾಗಿದ್ದು, ಇತ್ತೀಚೆಗೆ ಮುಂಬಡ್ತಿ ಹೊಂದಿದ ಕಾರಣಕ್ಕೆ ರಜೆ ಮೇಲೆ 20 ದಿನಗಳ ಹಿಂದೆ ಊರಿಗೆ ಬಂದಿದ್ದರು.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಮಾಜಿ ಸೈನಿಕ ಸಾವು
ಬುಧವಾರ ಸ್ವಗ್ರಾಮ ಕಂದಗಲ್ಲು ಗ್ರಾಮದಿಂದ ಸಂಜೆ ಬೈಕಿನಲ್ಲಿ ಹೂವಿನಹಡಗಲಿ ಪಟ್ಟಣಕ್ಕೆ ಬರುವಾಗ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ತೀವ್ರ ಗಾಯಗೊಂಡಿದ್ದ ಸೈನಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇವರಿಗೆ ಪತ್ನಿ, 3 ಮತ್ತು ವರ್ಷದ ಇಬ್ಬರು ಪುತ್ರಿಯರು, 6 ತಿಂಗಳ ಗಂಡು ಮಗುವಿದೆ. ಪತ್ನಿ ಹೊನ್ನಮ್ಮ ನೀಡಿದ ದೂರಿನ್ವಯ ಹೂವಿನಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.