ವೇತನಕ್ಕೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರಕ್ಕೆ ಮಂಜೂರಾತಿ ನೀಡಿದ ಹಿನ್ನೆಲೆಯಲ್ಲಿ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದ ಬಳಿ ಎಐಟಿಯುಸಿ ಕಾರ್ಮಿಕ ಸಂಘದಿಂದ ಮಂಗಳವಾರ ಸಂಭ್ರಮಾಚರಣೆ ನಡೆಯಿತು.  
ಜಿಲ್ಲೆ

ಮಾರ್ಚ್‌ನಿಂದ ಹೆಚ್ಚುವರಿ ವೇತನ

ಶಶಿಧರ ಎಲ್

ಹಟ್ಟಿಚಿನ್ನದಗಣಿ: ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಕೊಡಿಸುವಲ್ಲಿ ಎಐಟಿಯುಸಿ ನೇತೃತ್ವದ ಕಾರ್ಮಿಕ ಸಂಘ ಸಫಲವಾಗಿದೆ ಎಂದು ಕಾರ್ಮಿಕ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.

ಕಾರ್ಮಿಕರಿಗೆ ಮಧ್ಯಂತರ ಪರಿಹಾರ ನೀಡಿರುವ ಕುರಿತು ಕ್ಯಾಂಪ್ ಬಸ್ ನಿಲ್ದಾಣದ ಬಳಿ ಮಂಗಳವಾರ ಬೆಳಗ್ಗೆ ನಡೆದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಬೆಲೆ ಏರಿಕೆಗೆ ತಕ್ಕಂತೆ ವೇತನ ಹೆಚ್ಚಳ ಕುರಿತು ಗಣಿ ಆಡಳಿತ ವರ್ಗಕ್ಕೆ ಹಕ್ಕೊತ್ತಾಯ ಸಲ್ಲಿಸಲಾಗಿತ್ತು. ಸರ್ಕಾರದ ಒಪ್ಪಿಗೆ ನಂತರ ಪೂರ್ಣ ಪ್ರಮಾಣದ ವೇತನ ಕೈ ಸೇರಲಿದೆ ಎಂದರು.

ವೇತನ ಒಪ್ಪಂದ ಅಂತಿಮವಾಗುವವರಗೆ ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ 2021ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ಶೇ.10 ಮಧ್ಯಂತರ ಪರಿಹಾರ ಒದಗಿಸಬೇಕೆಂದು ನಿಗಮದ ಆಡಳಿತ ಮಂಡಳಿಯನ್ನು ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ ಪಗಾರದಲ್ಲಿ ಹೆಚ್ಚುವರಿ ವೇತನ ನೀಡಲಾಗುತ್ತಿದೆ. ಮೆಡಿಕಲ್ ಅನ್‌ಫಿಟ್ ಯೋಜನೆಯಡಿ ಕಾರ್ಮಿಕರ ಮಕ್ಕಳಿಗೆ ನೌಕರಿ ನೀಡುವ ಯೋಜನೆ ಚರ್ಚೆ ಹಂತದಲ್ಲಿದ್ದು ಆದಷ್ಟು ಬೇಗನೆ ಜಾರಿಯಾಗಲಿದೆ ಎಂದು ಚಂದ್ರಶೇಖರ್ ತಿಳಿಸಿದರು.