ಜಿಲ್ಲೆ

ಸಾಲಭಾದೆ ತಾಳದೆ ಪತಿ, ಪತ್ನಿ, ಪುತ್ರಿ ಆತ್ಮಹತ್ಯೆ

Mysuru - Desk - Naveen Kumar H P


ಚನ್ನರಾಯಪಟ್ಟಣ : ಸಾಲಭಾದೆ ತಾಳಲಾರದೆ ಹೇಮಾವತಿ ನಾಲೆಗೆ ಹಾರಿ ಪತಿ, ಪತ್ನಿ, ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ಕೆರೆ ಬೀದಿಯ ಶ್ರೀನಿವಾಸ್ (43), ಶ್ವೇತಾ (36) ಹಾಗೂ ನಾಗಾಶ್ರೀ (13) ಆತ್ಮಹತ್ಯೆಗೆ ಶರಣಾದವರು.


ಶ್ರೀನಿವಾಸ್ ಕಾರು ಚಾಲಕನಾಗಿದ್ದು, ಪತ್ನಿ ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಆನ್‌ಲೈನ್ ಗೇಮ್‌ಗೆ ದಾಸರಾಗಿದ್ದ ಶ್ರೀನಿವಾಸ್ ವಿವಿಧೆಡೆ ಸಾಲ ಮಾಡಿಕೊಂಡಿದ್ದರು. ಮರುಪಾವತಿಸಲಾಗದೆ. ಮಂಗಳವಾರದಿಂದ ಮೂವರು ಕಾಣೆಯಾಗಿದ್ದರು. ಆದರೆ ಬುಧವಾರ ಸಂಜೆ ತಾಲೂಕಿನ ಬಾಗೂರು ಹೋಬಳಿಯ ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್, ಶ್ವೇತಾ ಶವ ಪತ್ತೆಯಾಗಿದೆ. ಶವ ಹೊರ ತೆಗೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಬಾಲಕಿ ನಾಗಾಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.