ಜಿಲ್ಲೆ

ಮದುವೆಯಾಗಿ ವಂಚಿಸಿದ ಹೆಂಡತಿಯ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಗಂಡ

ಚಿಕ್ಕಬಳ್ಳಾಪುರ: ಮದುವೆಯಾಗಿ ವಂಚಿಸಿದ ಹೆಂಡತಿಯ ವಿರುದ್ಧ ಗಂಡನೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು ಪರಸ್ಪರ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿವೆ.

ಬೆಳಗಾವಿಯ ಜಿಲ್ಲೆಯ 33 ವರ್ಷದ ಯುವತಿ ಆರೋಪಿ. ಈಕೆ ಮೂರು ಮದುವೆಯಾಗಿದ್ದಾಳೆ ಎನ್ನಲಾಗಿದೆ. ಇದರ ನಡುವೆ ಪರಸ್ಪರ ವಂಚನೆಯ ಆರೋಪದ ಗಲಾಟೆಯು ದೊಡ್ಡ ಹೈಡ್ರಾಮ್​ಗೆ ಸಾಕ್ಷಿಯಾಗಿದೆ. ಇದೀಗ ಎರಡನೇ ಪತಿ ಶಿಡ್ಲಘಟ್ಟದ ಮುನಿರಾಜು ವಂಚನೆಗೊಳಗಾಗಿರುವ ಬಗ್ಗೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

*ಪ್ರಕರಣದ ಹಿನ್ನೆಲೆ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಂದಿಗೆ ಎಂಟು ತಿಂಗಳಿಂದ ಮುನಿರಾಜು ವಾಸಿಸುತ್ತಿದ್ದ. ಇದರ ನಡುವೆ ಬೆಳಗಾವಿಯಲ್ಲಿನ ಮದುವೆಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಆರೋಪಿ, ಅಲ್ಲಿ ಪೊಲೀಸ್​ ಠಾಣೆಯಲ್ಲಿ ಕಿರುಕುಳದ ಬಗ್ಗೆ ದೂರು ದಾಖಲಿಸಿದ್ದಳು. ಆಸ್ತಿಗಾಗಿ ಕೂಡಿ ಹಾಕಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾಳೆ. ಇತ್ತ ಆರೋಪಿ ಶಿಡ್ಲಟ್ಟ ಠಾಣೆಯಲ್ಲಿ ಸುಳ್ಳು ಆರೋಪ ಮತ್ತು ವಂಚನೆಯ ಬಗ್ಗೆ ದೂರು ನೀಡಿದ್ದಾನೆ.

*ಯುವತಿಗೆ ಮೂರು ಮದುವೆ?

ಈಗಾಗಲೇ ಆರೋಪಿ ಯುವತಿಗೆ ಮೂರು ಮದುವೆಯಾಗಿದೆ. ಮೊದಲು ಚಿಕ್ಕಬಳ್ಳಾಪುರದ ಮುನಿರಾಜು, ಬಳಿಕ ಶಿಡ್ಲಟ್ಟ ಸುಧಾಕರ್​ ಜತೆಗೆ ಮದುವೆಯಾಗಿದ್ದು ಇದೀಗ ಬೆಳಗಾವಿ ಮೂಲದ ರೋಹಿತ್​ ಎಂಬಾತನನ್ನು ಮೂರನೇ ಮದುವೆಯಾಗಿದ್ದಾಳೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.