ಧಾರವಾಡ: ಪತ್ನಿಯನ್ನು ಕೊಂದಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಇಲ್ಲಿನ ರಾಜೀವಗಾಂಽನಗರದ ಗಣೇಶ ಬಳ್ಳಾರಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಹೊಸದಾಗಿ ಕಟ್ಟುತ್ತಿದ್ದ ತನ್ನ ಮನೆಯಲ್ಲಿ ಮಹಿಳೆಯ ಜೊತೆಗೆ ಇದ್ದ ಸಂದರ್ಭದಲ್ಲಿ ಗಣೇಶನ ಪತ್ನಿ ಶಿಲ್ಪಾ ಬಳ್ಳಾರಿ ನೋಡಿದ್ದಳು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದಳು ಎಂದು ಕುಪಿತಗೊಂಡ ಗಣೇಶ, ಶಿಲ್ಪಾ ಬಳ್ಳಾರಿಯನ್ನು ಸಲಿಕೆಯಿಂದ ಹೊಡೆದು ಕೊಲೆ ಮಾಡಿದ್ದ. ವಿದ್ಯಾಗಿರಿ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಮಹಾಂತೇಶ ಬಸಾಪುರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧಿಶ ಎನ್. ಸುಬ್ರಮಣ್ಯ ಅವರು ಗಣೇಶ ತಪ್ಪಿತಸ್ಥ ಎಂದು ನಿರ್ಧರಿಸಿ ಶಿಕ್ಷೆ ಪ್ರಕಟಿಸಿದ್ದಾರೆ.
ಸರ್ಕಾರದ ಪರ ಪ್ರಶಾಂತ ಎಸ್. ತೊರಗಲ್ ವಾದ ಮಂಡಿಸಿದ್ದರು.