ಮುಳಬಾಗಿಲು: ತಾಲೂಕಿನ ಮುಡಿಯನೂರು ಗ್ರಾಪಂ ವ್ಯಾಪ್ತಿಯ ಅರಹಳ್ಳಿಯಲ್ಲಿ ಪತ್ನಿಯೇ ಪತಿಯನ್ನು ಕೊಲೆಮಾಡಿರುವ ಆರೋಪ ಕೇಳಿ ಬಂದಿದೆ.
ಅರಹಳ್ಳಿಯ ಮಂಜುನಾಥ್ (40) ಮೃತ. ಮದ್ಯ ವ್ಯಸನಿಯಾಗಿದ್ದ ಮಂಜುನಾಥ ಭಾನುವಾರ ಕುಡಿದು ಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದಾಗ ಪತ್ನಿ ಜ್ಯೋತಿ ಮತ್ತು ಮಗ ಹಲ್ಲೇ ಮಾಡಿರುವುದರಿಂದ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.