ಜಿಲ್ಲೆ

ಪತಿ ಶಾಸಕ, ಪತ್ನಿ ಅದೇ ಕ್ಷೇತ್ರದ ತಹಸೀಲ್ದಾರ್!

ಬಸವಕಲ್ಯಾಣ: ಪತಿ ಶಾಸಕ, ಪತ್ನಿ ಅದೇ ಕ್ಷೇತ್ರದ ತಹಸೀಲ್ದಾರ್! ಹೌದು, ಬೀದರ್ ಜಿಲ್ಲೆ ಬಸವಕಲ್ಯಾಣ ತಹಸೀಲ್ದಾರ್ ಸಾವಿತ್ರಿ ಹಾಗೂ ಶಾಸಕ ಶರಣು ಸಲಗರ್ ಪತಿ-ಪತ್ನಿ.

ಬಸವಕಲ್ಯಾಣ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶರಣು ಸಲಗರ್ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಚುನಾವಣೆ ಮುಗಿಯುವವರೆಗೆ ಬೇರೆಡೆಗೆ ವರ್ಗಾವಣೆಗೊಂಡಿದ್ದ ಸಾವಿತ್ರಿ ಮತ್ತೆ ಬಸವಕಲ್ಯಾಣಕ್ಕೆ ನಿಯೋಜನೆಗೊಂಡಿ

ದ್ದಾರೆ. ಶುಕ್ರವಾರ ಶರಣು ಸಲಗರ್ ಅವರು ಸಾವಿತ್ರಿ ಅವರಿಗೆ ಸಿಹಿ ತಿನ್ನಿಸುವ ಮೂಲಕ ಬರಮಾಡಿ ಕೊಂಡರು. ಸಾವಿತ್ರಿ ಕೂಡ ಪತಿ ಶಾಸಕರಾಗಿದ್ದಕ್ಕೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.