ಜಿಲ್ಲೆ

ಪತಿ ಮಾನಸಿಕ ಹಿಂಸೆಯಿಂದ ಪತ್ನಿ ಆತ್ಮಹತ್ಯೆ

Haveri - Kariyappa Aralikatti

ರಟ್ಟಿಹಳ್ಳಿ: ಪತಿ ಹಾಗೂ ಆತನ ಕುಟುಂಬದವರ ಮಾನಸಿಕ ಹಿಂಸೆಯಿಂದ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಅಣಜಿ ಗ್ರಾಮದ ಶಾರದಾ (ಪವಿತ್ರಾ) ಪ್ರಕಾಶ ಬಳ್ಳಾರಿ (34) ಮೃತ ಮಹಿಳೆ.

ಪ್ರಕರಣದ ಕುರಿತು ಮೃತ ತಾಯಿ ನೀಡಿದ ದೂರಿನ ಮೇರೆಗೆ ಮೃತಳ ಪತಿ ಪ್ರಕಾಶ ಭರಮಪ್ಪ ಬಳ್ಳಾರಿ, ಚಂದ್ರಮ್ಮ ಬಳ್ಳಾರಿ, ಭರಮಪ್ಪ ಬಳ್ಳಾರಿ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಶಾರದಾಳನ್ನು 8 ವರ್ಷಗಳ ಹಿಂದೆ ಪ್ರಕಾಶಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆರಂಭದಲ್ಲಿ ಚನ್ನಾಗಿದ್ದ ಆತ ಎರಡು ಮಕ್ಕಳಾದ ಮೇಲೆ ನೀನು ಚಂದವಾಗಿಲ್ಲ. ಮದುವೆ ಸಮಯದಲ್ಲಿ ಹೆಚ್ಚಿನ ವರದಕ್ಷಿಣಿ ಕೊಟ್ಟಿಲ್ಲ ಎಂದು ಮಾನಸಿಕ ಹಿಂಸೆ ಕೊಡುತ್ತಿದ್ದ. ಇದರಿಂದ ಶಾರದಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.