ಜಿಲ್ಲೆ

ಪತಿಯಿಂದಲೇ ಪತ್ನಿಯ ಬರ್ಬರ ಕೊಲೆ

ಕನಕಪುರ: ತಾಲೂಕಿನ ಚಾಕನಹಳ್ಳಿಯಲ್ಲಿ ಆಸ್ತಿ ವಿಚಾರಕ್ಕೆ ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಗೌರಮ್ಮ(55) ಮೃತೆ. ಶಿವರಾಜು ಆರೋಪಿ.

30 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. ಆದರೆ, ಗೌರಮ್ಮ ಪತಿ ಹಾಗೂ ಮಕ್ಕಳಿಂದ ಪ್ರತ್ಯೇಕವಾಗಿದ್ದರು. ಇತ್ತೀಚೆಗೆ ಗೌರಮ್ಮ ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದರು. ಇದರಿಂದ ಕೋಪಗೊಂಡಿದ್ದ ಶಿವರಾಜ್​ ಶನಿವಾರ ಬೆಳಗ್ಗೆ 9.30ರ ಸಮಯದಲ್ಲಿ ಜಮೀನಿನ ಮನೆಯಲ್ಲಿ ಮೊದಲು ಕಣ್ಣಿಗೆ ಕಾರದ ಪುಡಿ ಎರಚಿ ನಂತರ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಗ್ರಾಮಾಂತರ ಪೊಲೀಸರು ಶಿವರಾಜು ಮತ್ತು ಪುತ್ರ ಸಿದ್ದರಾಜುನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತಳ ಶವವನ್ನು ನಗರದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಎಸ್​ಪಿ ಶ್ರೀನಿವಾಸ್​ಗೌಡ, ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಡಿವೈಎಸ್​ಪಿ ಗಿರಿ, ಸರ್ಕಲ್​ ಇನ್​ಸ್ಪೆಕ್ಟರ್​ ವಿಕಾಸ್​, ಎಸ್​ಐ ಆಕಾಶ್​ ಭೇಟಿ ನೀಡಿ ಪರಿಶೀಲಿಸಿದರು.