ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮ ವ್ಯಾಪ್ತಿಯ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಆದರ್ಶ ವಿದ್ಯಾಲಯದ ಗೋಡೆ ಕಾಮಗಾರಿ ಪರಿಶೀಲಿಸಿದರು. ಡಾ.ಎ.ಆರ್.ಮಣಿ, ಇಆರ್‌ಕೆ ರೋಸಿವ್ ಇತರರಿದ್ದರು.  
ಜಿಲ್ಲೆ

ಹುಣಶ್ಯಾಳ ಪಿಬಿ, ಇಂಗಳೇಶ್ವರ, ಡೋಣೂರ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ

ಹೂವಿನಹಿಪ್ಪರಗಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸೂಚನೆಯಂತೆ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ, ಇಂಗಳೇಶ್ವರ, ಹಾಗೂ ಡೋಣೂರ ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ರೂರಲ್ ಇನ್‌ಸ್ಟಿಟ್ಯೂಟ್ ತಮಿಳುನಾಡು ಅಧಿಕಾರಿಗಳಾದ ಡಾ.ಎ. ಆರ್.ಮಣಿ, ಇಆರ್‌ಕೆ ರೋಸಿವ್ ಅವರು ಶನಿವಾರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಕ್ಷೇತ್ರ ಭೇಟಿ ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಾಯೋಜಿತ ಪ್ರಗತಿ ಪರಿಶೀಲಿಸಿದರು.

ಹುಣಶ್ಯಾಳ ಪಿಬಿ ಗ್ರಾಪಂಗೆ ಭೇಟಿ ನೀಡಿದ ಅಧಿಕಾರಿಗಳು ಮನರೇಗಾ ಯೋಜನೆಯ ಕಾಮಗಾರಿ ಕಡತಗಳು, ನಂ.7 ರಜಿಸ್ಟರ್ ವಹಿಗಳು, ಮಹಿಳಾ ಸ್ವಸಹಾಯ ಸಂಘದ ರಿಜಿಸ್ಟರ್‌ಗಳನ್ನು ಪರಿಶೀಲಿಸಿದರು. ಗ್ರಾಪಂಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಹಿತಿ ಪಡೆದರು.

ಗ್ರಾಪಂ ಸಭಾಭವನದಲ್ಲಿ ನರೇಗಾ ಲಾನುಭವಿಗಳು, ಗ್ರಾಮದ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ವಿಧವೆಯರ ಪಿಂಚಣಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದರು. ಮನರೇಗಾ ಯೋಜನೆ ಲಾನುಭವಿಗಳ ಜತೆ ಸಂವಾದ ನಡೆಸಿ ನಿಗದಿತ ಸಮಯದಲ್ಲಿ ಕೂಲಿ ಪಾವತಿ ಆಗುವ ಕುರಿತು ಮನವರಿಕೆ ಮಾಡಿಕೊಂಡರು.

ಜಾಬ್ ಕಾರ್ಡ್‌ನಲ್ಲಿನ ಕೆಲವು ಲೋಪದೋಷಗಳನ್ನು ಸರಿಪಡಿಸಲು ಸೂಚಿಸಿದರು. ಮನರೇಗಾ ಯೋಜನೆಯಡಿಯ ಆದರ್ಶ ವಿದ್ಯಾಲಯ ಶಾಲೆಯ ಆವರಣ ಹಾಗೂ ಗೋಡೆ ಕಾಮಗಾರಿ, ಅರಣ್ಯ ಇಲಾಖೆಯ ನೆಡುತೋಪು ಕಾಮಗಾರಿ ಹಾಗೂ ಕಡತಗಳನ್ನು ಪರಿಶೀಲಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳಿಗೆ ಭೇಟಿ ನೀಡಿ ಲಾನುಭವಿಗಳ ಜತೆ ಸಂವಾದ ನಡೆಸಿದರು. ಇದೇ ರೀತಿ ಇಂಗಳೇಶ್ವರ ಹಾಗೂ ಡೋಣೂರ ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಸವನಬಾಗೇವಾಡಿ ತಾಪಂ ಇಒ ಪ್ರಕಾಶ ದೇಸಾಯಿ, ಹೂವಿನಹಿಪ್ಪರಗಿ ಉಪತಹಸೀಲ್ದಾರ್ ಎಸ್.ಕೆ.ಪಾಟೀಲ, ಗ್ರಾಮ ಆಡಳಿತ ಅಧಿಕಾರಿ ಬಿ.ಬಿ.ಕಮತ, ವಿಶ್ವನಾಥ ಶಹಾಪುರ, ತಾಂತ್ರಿಕ ಸಂಯೋಜಕ ವಿಶ್ವನಾಥ ಪಟ್ಟಣಶೆಟ್ಟಿ, ತಾಲೂಕು ವಸತಿ ನೋಡಲ್ ಅಧಿಕಾರಿ ಸಿದ್ದನಗೌಡ ಬಿರಾದಾರ, ಅಭಿವೃದ್ಧಿ ಅಧಿಕಾರಿಗಳಾದ ಇಮತಾಜ ಮಮದಾಪುರ, ಜೈಕುಮಾರ ದೇವರನಾವದಗಿ, ರಾಜೇಶ್ವರಿ ಪಾಟೀಲ ಇತರರಿದ್ದರು.