ಜಿಲ್ಲೆ

ಸಾಸಲು ಗ್ರಾಮದ ಹುಂಡಿಯಲ್ಲಿ 5.10 ಲಕ್ಷ ರೂ.

ಎ. ಆರ್. ರಘುರಾಮ

ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲಗಳ ಹುಂಡಿ ಹಣ ಎಣಿಕೆ ಕಾರ್ಯ ಗುರುವಾರ ನಡೆದಿದ್ದು ಒಟ್ಟು 5,10,494 ರೂ. ಸಂಗ್ರಹವಾಗಿದೆ. ಮುಜರಾಯಿ ಅಧಿಕಾರಿ ತಹಸೀಲ್ದಾರ್ ಅಶೋಕ್ ಮಾರ್ಗದರ್ಶನದಲ್ಲಿ ಉಪತಹಸೀಲ್ದಾರ್ ವೀಣಾ ನೇತೃತ್ವದಲ್ಲಿ ದೇಗುಲ ಆವರಣದಲ್ಲಿ ಜರುಗಿತು. ಹುಂಡಿ ಎಣಿಕೆಯಲ್ಲಿ ಎರಡು ದೇಗುಲಗಳಿಂದ ಒಟ್ಟು 5,10,494 ರೂ. ಕಾಣಿಕೆ ರೂಪದಲ್ಲಿ ಹಣ ಸಂಗ್ರಹವಾಗಿದೆ. ಜತೆಗೆ ಕಣ್ಣು, ನಾಗರಸೆಡೆಯಂತಹ ಮತ್ತಿತರ ಆಕೃತಿಯ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಯಲ್ಲಿ ಸಮರ್ಪಿಸಲಾಗಿತ್ತು. ಒಟ್ಟು 16 ಹುಂಡಿಗಳನ್ನು ಕಂದಾಯ ಇಲಾಖೆಯವರು ಬೆಳಗ್ಗಿನಿಂದ ಸಂಜೆಯವರೆಗೆ ಎಣಿಕೆ ಮಾಡಿದರು. ಕಾಣಿಕೆ ಹಣವನ್ನು ಕೆ.ಆರ್.ಪೇಟೆ ಬ್ಯಾಂಕ್ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮೆ ಮಾಡಲಾಯಿತು. ರಾಜಸ್ವ ನಿರೀಕ್ಷಕ ಡಿ.ಆರ್.ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಬಿ.ಎಂ.ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನೀಲ್‌ಗಾಣಿಗೇರ್, ಹರ್ಷಿತಾ, ವನಜಾಕ್ಷಿ, ಲಕ್ಷ್ಮೀ, ಮುಜರಾಯಿ ಸಹಾಯಕಿ ಪೂರ್ಣಿಮಾ, ಗ್ರಾಮ ಸಹಾಯಕರು, ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ, ಗ್ರಾಮ ಮುಖಂಡರು ಹಾಜರಿದ್ದರು.