ಹರಿಹರ: ಇಲ್ಲಿನ ಶ್ರೀ ಹರಿಹರೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಶನಿವಾರ ನಡೆಸಿದ್ದು , ಒಟ್ಟು 15,71,260 ರೂ. ಸಂಗ್ರಹವಾಗಿದೆ.
ಶ್ರೀ ಹರಿಹರೇಶ್ವರ ದೇವರ ಹುಂಡಿಯಲ್ಲಿ 14,28,615 ರೂ. ಸಂಗ್ರಹವಾಗಿದ್ದರೆ ಇದೇ ದೇವಸ್ಥಾನದ ಆವರಣದಲ್ಲಿರುವ ಶ್ರೀ ಲಕ್ಷ್ಮೀದೇವಿ ಹುಂಡಿಗೆ 1,42,645 ರೂ. ಕಾಣಿಕೆ ಬಿದ್ದಿದೆ.
ಹುಂಡಿಯಲ್ಲಿ ನಿಷೇಧಿತವಾಗಿ ಬದಲಾವಣೆಗೆ ಅವಕಾಶ ಇರುವ 2 ಸಾವಿರ ಮುಖಬೆಲೆಯ 4 ನೋಟುಗಳು, ಬೆಳ್ಳಿ ಮತ್ತು ಬಂಗಾರದ್ದೆಂದು ತೋರುವ ಕೆಲವು ಹರಕೆಯ ವಸ್ತುಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ.
ಸಾಮಾನ್ಯವಾಗಿ ಪ್ರತಿ ವರ್ಷದ ಜನವರಿ ತಿಂಗಳಲ್ಲಿ ಈ ಹುಂಡಿಗಳ ಎಣಿಕೆ ಕಾರ್ಯ ನಡೆಯುತ್ತಿತ್ತು. ಸೆ. 30ರಂದು 2 ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆಗೆ ಕೊನೆ ದಿನವಾಗಿರುವುದರಿಂದ 3 ತಿಂಗಳು ಮುಂಚೆಯೇ ಎಣಿಗೆ ಕಾರ್ಯ ನಡೆಸಲಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
ಗುತ್ತೂರು ಆಂಜನೇಯ ಸ್ವಾಮಿ ಹುಂಡಿ ಎಣಿಕೆ:
ಹರಿಹರ ಸಮೀಪದ ಗುತ್ತೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಸೆ.27ರಂದು ನಡೆಸಲಾಗಿದ್ದು, 37, 490 ರೂ. ಕಾಣಿಕೆ ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮೂಲಿಮನಿ ಸಿದ್ದಪ್ಪ, ಐರಣಿ ಹನುಮಂತಪ್ಪ, ಗರಡಿಮನಿ ಬಸವರಾಜಪ್ಪ ಇದ್ದರು.