ಹುಣಸೂರು ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜು ಸಾಧನೆ
ಹುಣಸೂರು : ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ವಿಜ್ಞಾನ, ಕಲಾ ಮತ್ತು ವಾಣಿಜ್ಯ ಸೇರಿದಂತೆ ಮೂರು ವಿಭಾಗಗಳಲ್ಲಿ ಸರ್ಕಾರಿ ಕಾಲೇಜುಗಳ ಪೈಕಿ ತಾಲೂಕಿಗೆ ಟಾಪರ್ ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ಸಾಧನೆ ಮಾಡಿದೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ, ಟಿಂಬರ್ ವ್ಯಾಪಾರಿ ಪುತ್ರಿ ನೂರ್ ಫಾತಿಮಾ 561 ಅಂಕ ಗಳಿಸುವ ಮೂಲಕ ತಾಲೂಕಿನ ಸರ್ಕಾರಿ ಕಾಲೇಜುಗಳ ಪೈಕಿ ಟಾಪರ್ ವಿದ್ಯಾರ್ಥಿನಿಯಾಗಿದ್ದಾಳೆ. ಕಂಪಲಾಪುರ ಗ್ರಾಮದ ಬಡಕುಟುಂಬದ ವಿದ್ಯಾರ್ಥಿನಿ ಕೆ.ಎಂ.ನಿಶ್ಚಿತಾ ಕಲಾ ವಿಭಾಗದಲ್ಲಿ 580 ಅಂಕ ಗಳಿಸಿ ತಾಲೂಕಿಗೆ ಟಾಪರ್ ಆಗಿದ್ದಾಳೆ. ಜಿಲ್ಲಾಮಟ್ಟದಲ್ಲಿ 3ನೇ ಸ್ಥಾನ ಗಳಿಸಿದ್ದಾಳೆ. ಈಕೆಯ ತಂದೆ ಲಾರಿ ಲೋಡರ್‌ಆಗಿ ದುಡಿಯುತ್ತಿದ್ದಾರೆ. ಹಾಗೆಯೇ ವಿದ್ಯಾರ್ಥಿನಿ ಯು.ಪಿ.ಸಂಜನಾ 578 ಅಂಕದೊಂದಿಗೆ ತಾಲೂಕಿನ ಎರಡನೇ ಟಾಪರ್ ಆಗಿದ್ದಾಳೆ ಎಂದು
ಎಂದು ಪ್ರಾಂಶುಪಾಲ ಎ.ರಾಮೇಗೌಡ ತಿಳಿಸಿದ್ದಾರೆ. ತಂದೆ -ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆರೈಕೆಯಲ್ಲಿ ಬೆಳೆದ ಮೀನಾಕ್ಷಿ ವಾಣಿಜ್ಯ ವಿಭಾಗದಲ್ಲಿ 573 ಅಂಕದೊಂದಿಗೆ ತಾಲೂಕಿನ ಟಾಪರ್ ಆಗಿದ್ದಾಳೆ. ಕನ್ನಡ ಭಾಷಾ ವಿಭಾಗದಲ್ಲಿ 9 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಇತಿಹಾಸ ವಿಭಾಗದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟಾರೆ ಶೇ.71.85, ವಾಣಿಜ್ಯ ವಿಭಾಗದಲ್ಲಿ ಶೇ.65 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.64.58ಫಲಿತಾಂಶ ದೊರಕಿದೆ ಎಂದು ಅವರು ವಿವರಿಸಿದ್ದಾರೆ.