ಮೈಸೂರು ವಿವಿ ಅಂತರ ಕಾಲೇಜು ವೇಟ್‌ಲಿಫ್ಟಿಂಗ್ ಮತ್ತು ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹುಣಸೂರು ಮಹಿಳಾ ಸರ್ಕಾರಿ ಕಾಲೇಜಿನ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಪುಟ್ಟಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೇಸ್ಕರ್ ಇತರರು ಇದ್ದರು. 
ಜಿಲ್ಲೆ

ಮಹಿಳಾ ಸರ್ಕಾರಿ ಕಾಲೇಜು ಪಾರಮ್ಯ

ನಾಗೇಶ ಎಸ್

ಹುಣಸೂರು: ಮೈಸೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕಿಕ್ ಬ್ಯಾಕ್ ಮತ್ತು ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜು ಕ್ರೀಡಾಪಟುಗಳು ತಂಡ ಪ್ರಶಸ್ತಿಯಲ್ಲಿ ದ್ವಿತೀಯ ಮತ್ತು ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನದೊಂದಿಗೆ ಪಾರಮ್ಯ ಮೆರೆದಿದ್ದಾರೆ.

ಮೈಸೂರಿನ ಸ್ಪೋರ್ಟ್ಸ್ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ 59ಕೆ.ಜಿ. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಯು.ಎನ್.ವರ್ಷಿತಾ ಪ್ರಥಮಸ್ಥಾನ ಗಳಿಸಿದ್ದಾರೆ. 64 ಕೆಜಿ ವಿಭಾಗದಲ್ಲಿ ವಿ.ಸಂಜನಾಶ್ರೀ ದ್ವಿತೀಯ ಹಾಗೂ ಅಮೂಲ್ಯಾ ತೃತೀಯ ಸ್ಥಾನ ಗಳಿಸಿದ್ದಾರೆ.

81 ಕೆ.ಜಿ. ವಿಭಾಗದಲ್ಲಿ ಎನ್.ಪವಿತ್ರಾ ಪ್ರಥಮ, 87 ಕೆ.ಜಿ. ವಿಭಾಗದಲ್ಲಿ ಕೆ.ಪದ್ಮಾ ಪ್ರಥಮ, ಮತ್ತು 87 ಕೆ.ಜಿ. ಪ್ಲಸ್ ವಿಭಾಗದಲ್ಲಿ ಎಚ್.ಆರ್.ಅಪೂರ್ವಾ ದ್ವಿತೀಯ ಸ್ಥಾನಗಳಿಸಿದ್ದಾರೆ. ಕ್ರೀಡಾಪಟುಗಳ ಸಾಧನೆಯನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೇಸ್ಕರ್ ಮತ್ತು ಅಧ್ಯಾಪಕ ವೃಂದ ಅಭಿನಂದಿಸಿದೆ.