ಹುಣಸಗಿಯಲ್ಲಿ ಸಂಕ್ರಾAತಿ ಸಂಭ್ರಮ ಕರ‍್ಯಕ್ರಮ
ವಿಜಯವಾಣಿ ಸುದ್ದಿಜಾಲ ಹುಣಸಗಿ
ಇಂದಿನ ನಮ್ಮ ಮಕ್ಕಳಿಗೆ ಕೇವಲ ಪಠ್ಯ ಬೋಧನೆ ಮಾಡಿದರೆ ಸಾಲದು. ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯ ಪರಿಚಯಿಸಬೇಕು ಎಂದು ಮುಖ್ಯಗುರು ರಾಮಣ್ಣ ಹೂಗಾರ ಹೇಳಿದರು.
ಪಟ್ಟಣದ ಯುಕೆಪಿ ಕ್ಯಾಂಪ್‌ನ ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಸಂಕ್ರಾAತಿ ಹಬ್ಬ ನಿಮಿತ್ತ ಸಂಕ್ರಾAತಿ ಹಳ್ಳಿ ಸೊಗಡು ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಪಠ್ಯ ಬೋಧನೆ ಬಿಟ್ಟು ಪಠ್ಯೇತರ ಚಟುವಟಿಕೆ ಕಡೆಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಪರಿಚಯಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.
ಸAಕ್ರಾAತಿ ನಮ್ಮ ದೇಶದಲ್ಲಿ ರೈತ ಕುಟುಂಬ ಆಚರಣೆ ಮಾಡುವ ಬಹುದೊಡ್ಡ ಹಬ್ಬ. ವಿಶೇಷವಾಗಿ ದಕ್ಷಿಣ ಭಾರತದ ಸುಗ್ಗಿ ಹಬ್ಬವೆಂದೇ ಪ್ರಸಿದ್ಧವಾಗಿದೆ. ತಮಿಳು ನಾಡಿನಲ್ಲಿ ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಸಂಕ್ರಾAತಿ ದಿನದಂದು ಜನರು ಪ್ರತಿ ಮನೆ ಮನೆಗೂ ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮಿಸುವ ದಿನವಾಗಿದೆ ಎಂದರು.
ಐದು ವರ್ಷದ ಮಕ್ಕಳಿಗೆ ಸಂಕ್ರಾAತಿ ಭೋಗಿ ತೆಗೆಯುವ ಕರ‍್ಯಕ್ರಮದಲ್ಲಿ ಮಕ್ಕಳನ್ನು ಕೂಡಿಸಿ ಅವರ ತಾಯಂದಿರಿAದ ಹಣ್ಣು ಎರೆಯುವ ಕರ‍್ಯಕ್ರಮ ನಡೆಯಿತು. ಸಂಸ್ಥಾಪಕ ಮಲ್ಲಿಕಾರ್ಜುನ ಗುತ್ತೇದಾರ್, ಶಿಕ್ಷಕಿಯರಾದ ವರಸಂಧ್ಯಾ, ಜಯಶ್ರೀ ಮಡಿವಾಳರ್, ಪ್ರಮೀಳಾ ನೂಲಿನ್, ಪ್ರಿಯಾಂಕಾ, ಸಂಧ್ಯಾ, ಕೌಶಿಯಾ ಬಾನು, ಆಸ್ಮಾ, ಪ್ರೇಮಾ ಇತರರಿದ್ದರು.