ಜಿಲ್ಲೆ

ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಹುನಗುಂದ: ತಾಲೂಕಿನ ಅಮಲಿಕೊಪ್ಪ ಮತ್ತು ಮೂಗನೂರ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಅಂಬಿಗೇರ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಬಂಧಿಸಿ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಮಲಿಕೊಪ್ಪ ಗ್ರಾಮದ ಸಂಗಪ್ಪ ಬಸವನಾಳ ಎಂಬುವವರ ಜಮೀನು ಪಾಲು ವಾಟ್ನಿ ಮಾಡಲು 6 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದನು. ಈ ಮೊದಲು 2 ಸಾವಿರ ರೂ. ಪಡೆದಿದ್ದು, ಇನ್ನುಳಿದ 4 ಸಾವಿರ ರೂ. ಹಣವನ್ನು ಬುಧವಾರ ಅಮೀನಗಡ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿ ಗ್ರಾಮ ಲೆಕ್ಕಾಧಿಕಾರಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಬಿ ಡಿಎಸ್‌ಪಿ ವೇಣುಗೋಪಾಲ. ಪಿಎಸ್‌ಐ ಚಂದ್ರಶೇಖರ ಮಠಪತಿ ಮತ್ತು ಸಿಬ್ಬಂದಿ ಇದ್ದರು.