ಗೂಡುರ (ಎಸ್ ಸಿ) ಗ್ರಾಮದಲ್ಲಿ ವಿವಿಧ ಕಾಮಗಾರಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿ ಪೂಜೆ ನೆರವೇರಿಸಿದರು. ಬಾಗಲಕೋಟೆ ಅಂಜುಮನ ಇಸ್ಲಾಂ ಕಮಿಟಿ ಅಧ್ಯಕ್ಷ ಜಾಫರ ಬೇಪಾರಿ, ಮಾಜಿ ಗ್ರಾಪಂ ಅಧ್ಯಕ್ಷ ಖಾಜೆಸಾಬ ಬಗವಾನ, ಮುಸ್ಲಿಂ ಯೂನಿಟಿ ಅಧ್ಯಕ್ಷ ಜಬ್ಬಾರ ಕಲಬುರ್ಗಿ, ವಕ್ಫ ಬೋರ್ಡ್‌ನ ಜಿಲ್ಲಾ ಅಧ್ಯಕ್ಷ ಮಹಬೂಬ ಸರಕಾವಸ ಇದ್ದರು. 
ಜಿಲ್ಲೆ

ಹುನಗುಂದ ಸಮಗ್ರ ಅಭಿವೃದ್ಧಿಗೆ ಬದ್ಧ

ದತ್ತಾತ್ರೇಯ ಪಿ ಕುಲಕರ್ಣಿ

ಅಮೀನಗಡ : ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವಂತಹ ಗುರಿ ಹೊಂದಿರುವ ಏಕೈಕ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯನವರು. ಹುನಗುಂದ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣ ಸಮೀಪ ಗೂಡುರ (ಎಸ್ ಸಿ) ಗ್ರಾಮದಲ್ಲಿ ಈಚೆಗೆ ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಯೋಜನೆ ಮತ್ತು ಅಲ್ಪಸಂಖ್ಯಾತರ ಸ್ಲಂ ಕಾಲೋನಿಗಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಂಜೂರಾದ ಐದು ಕೋಟಿ ರೂ. ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಗೂಡುರ (ಎಸ್ ಸಿ) ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮತಕ್ಷೇತ್ರದ ಅಲ್ಪಸಂಖ್ಯಾತ ಕಾಲನಿಗಳಲ್ಲಿ ಇಲಾಖೆ ವತಿಯಿಂದ ವಿವಿಧ ಅಭಿವೃದ್ಧಿ ಯೋಜನೆಗಳು ಕೈಗೊಳ್ಳಲಾಗುವುದು. ನಾವು ಬರುತ್ತೇವೆ ಅಂದರೆ ಮತ್ತೆ ಅಭಿವೃದ್ಧಿಗೋಸ್ಕರ ಬರುತ್ತೇವೆ ಎಂದರು.

ಬಾಗಲಕೋಟೆ ಅಂಜುಮನ ಇಸ್ಲಾಂ ಕಮಿಟಿ ಅಧ್ಯಕ್ಷ ಜಾಫರ ಬೇಪಾರಿ, ಮಾಜಿ ಗ್ರಾಪಂ ಅಧ್ಯಕ್ಷ ಖಾಜೆಸಾಬ ಬಗವಾನ, ಮುಸ್ಲಿಂ ಯೂನಿಟಿ ಅಧ್ಯಕ್ಷ ಜಬ್ಬಾರ ಕಲಬುರ್ಗಿ, ವಕ್ಫ ಬೋರ್ಡನ ಜಿಲ್ಲಾ ಅಧ್ಯಕ್ಷ ಮಹಬೂಬ ಸರಕಾವಸ, ಸೂಲೇಮಾನ ಬಂಗಾರಚುಕ್ಕಿ, ಚಂದ್ರಶೇಖರ ಬಳಗಾರ ಇತರರಿದ್ದರು.