ಜಿಲ್ಲೆ

ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸಿ

ಹುನಗುಂದ: ಎಪಿಎಂಸಿ ಆವರಣದಲ್ಲಿ ಜಾನುವಾರು ಸಂತೆ ಆರಂಭಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಪ್ರತಿ ಶನಿವಾರ ಜಾನುವಾರು ಸಂತೆ ಆರಂಭಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪಿಡ್ಡಪ್ಪ ಕುರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಹುನಗುಂದ ಕೃಷಿ ಉತ್ಪನ್ನ ಮಾರುಕಟ್ಟೆ ವಿಶಾಲವಾದ ಗಿಡ ಮರಗಳಿಂದ ಕೂಡಿದ ಆವರಣ ಹೊಂದಿದೆ. ಜನರಿಗೆ ಕುಡಿಯಲು ಶುದ್ಧ ಕುಡಿಯುವ ನೀರಿನ ಘಟಕ, ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಇದೆ. ಮಾರುಕಟ್ಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿದೆ. ಆದ್ದರಿಂದ ವ್ಯಾಪಾರ ವಹಿವಾಟುದಾರರಿಗೆ ಸೂಕ್ತವಾದ ವ್ಯವಸ್ಥೆಯನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಕಾರ್ಯದರ್ಶಿ ಆರ್.ಎಂ. ದಂಡಿನ, ಸಂಘದ ಕಾರ್ಯಾಧ್ಯಕ್ಷ ರಸೂಲಸಾಬ ತಹಸೀಲ್ದಾರ್, ಉಪಾಧ್ಯಕ್ಷ ಬಸನಗೌಡ ಪಾಟೀಲ, ಮಲ್ಲನಗೌಡ ದೊಡ್ಡಮನಿ, ಪರಮೇಶಿ ಕುರಿ, ಬಸನಗೌಡ ತಮ್ಮಣ್ಣವರ, ಮಂಜುನಾಥ ಕುರಿ, ಯಲ್ಲಪ್ಪ ದೊಡ್ಡಮನಿ, ತಿಪ್ಪಣ್ಣ ಪೂಜಾರಿ, ಶಾಮು ಯಡಹಳ್ಳಿ, ಯಲ್ಲಪ್ಪ ದೊಡ್ಡಮನಿ, ಬಾಳಪ್ಪ ಕಲಾಲ, ಬಾಷಾಸಾಬ ಹೂಲಗೇರಿ, ಸಂಗಣ್ಣ ಅವಾರಿ, ರಜಾಕ್ ಧನ್ನೂರ ಇದ್ದರು.