ಜಿಲ್ಲೆ

ಹುಬ್ಬಳ್ಳಿಯಲ್ಲಿ ತಿರಂಗಾ ಯಾತ್ರೆ 12ರಂದು

ಹುಬ್ಬಳ್ಳಿ: ಸ್ವಾತಂತ್ರ್ಯೊತ್ಸವದ ನಿಮಿತ್ತ ಹುಬ್ಬಳ್ಳಿಯಲ್ಲಿ ಆ. 12ರಂದು ಹರ್ ಘರ್ ತಿರಂಗಾ ಯಾತ್ರೆ ಆಯೋಜಿಸಲಾಗಿದೆ ಎಂದು ಹಮ್ ಭಾರತಿ ವೆಲ್ಪೇರ್ ಫೌಂಡೇಷನ್ ಅಧ್ಯಕ್ಷ ಅನ್ವರ್ ಮುಲ್ಲಾ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಚಿನ್ಮಯ ವಿದ್ಯಾಲಯದಿಂದ 150 ಅಡಿ ಉದ್ದದ ರಾಷ್ಟ್ರಧ್ವಜವನ್ನು ಪ್ರದರ್ಶಿಸುತ್ತ ದೇಶಪಾಂಡೆನಗರ ಮಾರ್ಗವಾಗಿ ಚನ್ಮಮ್ಮ ವೃತ್ತದವರೆಗೆ ತಿರಂಗಾ ಯಾತ್ರೆ ನಡೆಸಲಾಗುವುದು. ಯಾತ್ರೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ನಗರದ ಸ್ವರನಾದ, ಢೋಲ ತಾಶಾ ಪಥಕ ತಂಡದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಲಾವಿದರು ಸಾಥ್ ನೀಡಲಿದ್ದಾರೆ ಎಂದರು.

ಕಳೆದ ವರ್ಷ (2022) ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ನಡೆಸಲಾದ ಹರ್ ಘರ್ ತಿರಂಗಾ ಅಭಿಯಾನವು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳ್ಳದೇ ಪ್ರತಿ ವರ್ಷ ಅದೇ ಉತ್ಸಾಹದಿಂದ ಪ್ರತಿಯೊಂದು ಮನೆಗಳ ಮೇಲೆ ಧ್ವಜಾರೋಹಣವಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚಿನ್ಮಯ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ರಾಘವೇಂದ್ರ ಮುತಾಲಿಕದೇಸಾಯಿ, ಅಶೋಕ ತೆಲೆಗಾರ, ಇತರರು ಇದ್ದರು.