ಜಿಲ್ಲೆ

ರಸ್ತೆ ಕಾಮಗಾರಿ ಪ್ರತಿದಿನ ಪರಿಶೀಲಿಸಿ: ಗುಡ್ಡದದೇವಾಪುರ ಗ್ರಾಮಸ್ಥರಿಗೆ ಶಾಸಕ ಅಮರೇಗೌಡ ಬಯ್ಯಪುರ ಸಲಹೆ

Koppal

ಹನುಮಸಾಗರ: ಸಿಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ಗ್ರಾಮಸ್ಥರು ನೋಡಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಸಮೀಪದ ಜಹಗೀರಗುಡದೂರ ಗ್ರಾಪಂ ವ್ಯಾಪ್ತಿಯ ಗುಡ್ಡದದೇವಾಪುರ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೆಕೆಆರ್‌ಡಿಬಿ ಯೋಜನೆಯಡಿ 55 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಅನುಕೂಲವಾಗಲೆಂದು ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು. ಗ್ರಾಮಸ್ಥರು ಪ್ರತಿದಿನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ಸಹಕಾರ ನೀಡಬೇಕು ಎಂದರು.

ಗ್ರಾಪಂ ಅಧ್ಯಕ್ಷ ಕೆ.ಎಸ್.ಹನುಮಂತ, ಉಪಾಧ್ಯಕ್ಷೆ ಮಹಾಂತಮ್ಮ ಭೀಮಪ್ಪ ಗುರಿಕಾರ, ಪಿಡಿಒ ಬಸವರಾಜ ಮಾಟರಂಗಿ, ಸದಸ್ಯರಾದ ವೆಂಕಟೇಶ ದೊರೆಗಳು, ತಿಪ್ಪಣ್ಣ ಜಾಲಿಹಾಳ, ವಿಜಯಲಕ್ಷ್ಮೀ ಸಾರಂಗಮಠ, ಸುಮಕ್ಕ ಹರಿಜನ, ಶರಣು ಮಾಲಗಿತ್ತಿ, ರತ್ನಮ್ಮ ಗುರಿಕಾರ, ರೇಣಮ್ಮ ಪೂಜಾರ, ಸಂಗಮೇಶ ಗಾಣದಾಳ, ಗ್ರಾಮದ ಮುಖಂಡರಾದ ಕಾಶಿನಾಥಸ್ವಾಮಿ ಸಾರಂಗಮಠ, ಶರಣಪ್ಪ ನಾಯಕರ, ಹನುಮಪ್ಪ ನೀರಾವರಿ, ರಂಗಪ್ಪ ದಿಂಡೂರ, ಶ್ರೀಕಾಂತ ಪೂಜಾರ, ದಾನೇಶ ಸಣ್ಣವಾಲಿಕರ, ಅನಂತರಾವ್ ಕೋನಾಪುರ, ಹನುಮಗೌಡ ಜಾಲಿಹಾಳ, ಶರಣಪ್ಪ ಮುಗಳಿ ಇತರರಿದ್ದರು.