ಶೌರ್ಯ ವಿಪ್ಪತ್ತು ನಿರ್ವಹಣಾ ಘಟಕದ ಸದಸ್ಯರು ವಿಜಯ ಮತ್ತು ತಂಗ ದಂಪತಿಗೆ ನೆರವಾಗಿರುವುದು. ಬಾಳೆಯಡ ದಿವ್ಯಾ ಮಂದಪ್ಪ, ಉಮಾಲಕ್ಷ್ಮೀ, ಸೀನಾ, ಮಾಧವನ್, ಶಂಕರ, ಶರವಣ, ರವಿ, ಚಂದ್ರಕಲಾ, ರಮ್ಯಾ, ಪೊನ್ನಮ್ಮ ಇದ್ದರು.  
ಜಿಲ್ಲೆ

ಮಾನವೀಯತೆ ಮೆರೆದ ಶೌರ್ಯ ವಿಪತ್ತು ನಿರ್ವಹಣಾ ಘಟಕ

ಅಭಿನಯ್ ಎಚ್.ಎಂ

ನಾಪೋಕ್ಲು: ಒಂದೆಡೆ ಪಾರ್ಶ್ವವಾಯು ಪೀಡಿತ ಗಂಡ... ಮತ್ತೊಂದೆಡೆ ಕಾಯಿಲೆಯಿಂದ ನರಳುತ್ತಿರುವ ಹೆಂಡತಿ...ಆಸರೆಗೆ ಯಾರೂ ಇಲ್ಲದ ದಯನೀಯ ಪರಿಸ್ಥಿತಿ....

ಇದು ಕಂಡು ಬಂದದ್ದು ಸಮೀಪದ ಕೂರುಳಿಯಲ್ಲಿ. ವಿಜಯ ಮತ್ತು ತಂಗ ದಂಪತಿ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು, ಇದನ್ನು ಕಂಡ ಶೌರ್ಯ ವಿಪ್ಪತ್ತು ನಿರ್ವಹಣಾ ಘಟಕದ ಸದಸ್ಯರು ಇದೀಗ ನೆರವಿಗೆ ಧಾವಿಸಿದ್ದಾರೆ.

ಸುಣ್ಣ-ಬಣ್ಣ ಕಾಣದ ಮನೆಗೆ ಶೌರ್ಯ ತಂಡ ಬಣ್ಣ ಖರೀದಿಸಿ ಪೂರ್ತಿಮನೆಗೆ ಬಣ್ಣ ಬಳಿದು ಕೊಡುವ ಮೂಲಕ ಮಾನವೀಯತೆ ಮೆರೆದಿದೆ. ಸೇವಾ ಕಾರ್ಯದಲ್ಲಿ ಘಟಕದ ತಾಲೂಕು ಮಾಸ್ಟರ್ ಬಾಳೆಯಡ ದಿವ್ಯಾ ಮಂದಪ್ಪ, ಉಮಾಲಕ್ಷ್ಮೀ, ಸೀನಾ, ಮಾಧವನ್, ಶಂಕರ, ಶರವಣ, ರವಿ, ಚಂದ್ರಕಲಾ, ರಮ್ಯಾ, ಪೊನ್ನಮ್ಮ ಮೊದಲಾದವರು ಕೈಜೋಡಿಸಿದ್ದು, ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾಗಿದ್ದಾರೆ.