ಹುಮನಾಬಾದ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಇಂಜಿನಿಯರ್ ದಿನಾಚರಣೆಯಲ್ಲಿ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಸಿ.ಕೆ.ಪಾಟೀಲ್, ಸುಭಾಷ ಗಂಗಾ, ನಾಗರಾಜ ಕರ್ಪೂರ, ಅಭಿಷೇಕ ಚಿದ್ರಿ, ನದೀಮ್, ಶರತಕುಮಾರ ನಾರಾಯಣಪೇಟಕರ್, ಸಂಜೀವಕುಮಾರ ಜುನ್ನಾ ಇತರರಿದ್ದರು. 
ಜಿಲ್ಲೆ

ಸಾಮಾಜಿಕ ಕಾರ್ಯಗಳಿಗೆ ಸದಾ ಸಿದ್ಧ

ರಾಜು ಯಮಕನಮರಡಿ

ಹುಮನಾಬಾದ್: ರೋಟರಿ ಕ್ಲಬ್‌ನ ಸಾಮಾಜಿಕ ಕಾರ್ಯಗಳಿಗೆ ಇಂಜಿನಿಯರ್ ಅಸೋಸಿಯೇಷನ್ ಸದಾ ಕೈಜೋಡಿಸಲು ಬದ್ಧವಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಕೆ.ಪಾಟೀಲï ಹೇಳಿದರು.

ಪಟ್ಟಣದಲ್ಲಿ ರೋಟರಿ ಕ್ಲಬ್​ ಹುಮನಾಬಾದ್ ಎಲೈಟ್ ಘಟಕ ಮಂಗಳವಾರ ಏರ್ಪಡಿಸಿದ್ದ ಇಂಜಿನಿಯರ್ ದಿನಾಚರಣೆ ಉದ್ಘಾಟಿಸಿದ ಅವರು, ಪ್ರತಿಯೊಬ್ಬ ಇಂಜಿನಿಯರ್ ವಿಶ್ವೇಶ್ವರಯ್ಯನವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು. ಪಟ್ಟಣ ಹಾಗೂ ತಾಲೂಕಿನಲ್ಲಿ ಇಂಜಿನಿಯರ್‌ಗಳ ಸಂಖ್ಯೆ ಅಧಿಕವಾಗಿರುವುದು ಹೆಮ್ಮೆ ಸಂಗತಿ. ವೃತ್ತಿ ಜತೆಗೆ ಹಿಂದುಳಿದ ಜನರಿಗೆ ಕೈಲಾದಷ್ಟು ಸಹಾಯಹಸ್ತ ಚಾಚಬೇಕು ಎಂದು ಸಲಹೆ ನೀಡಿದರು.

ಅಸೋಸಿಯೇಷನ್ ಉಪಾಧ್ಯಕ್ಷ ಸುಭಾಷ ಗಂಗಾ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ಕಾರ್ಯಕ್ಕೆ ಸದಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ರೋಟರಿ ಕ್ಲಬ್​ ಅಧ್ಯಕ್ಷ ನಾಗರಾಜ ಕರ್ಪೂರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಅಭಿಷೇಕ ಚಿದ್ರಿ, ನದೀಮ್, ಪ್ರಶಾಂತ ಸಾಗರ, ಡಾ.ಶಶಿಕಾಂತ ಹಾರಕೂಡ, ಕಾಶೀನಾಥ ಖಂಡಗೊಂಡ, ಪ್ರಕಾಶ ತಟಪಟಿ, ನಾಗೇಶ ಕಮಠಾಣೆ, ರಾಹುಲ್ ಬತಲಿ, ಹರೀಶ್ ಅಗಡಿ, ಕರಣ ಪಾಟೀಲ್​, ರಾಜದೀಪ ಪಾಟೀಲ್​, ಇಂಜಿನಿಯರ್‌ಗಳಾದ ವಿಜಯಕುಮಾರ ರುದ್ರನೂರ, ರಾಜು ಜಾಜಿ, ವಿನಾಯಕ ರಘೋಜಿ, ಸೈಯದ್ ಖಾಜಾ, ರಾಘವೇಂದ್ರ ವಿಭೂತಿ, ಸಂಜೀವಕುಮಾರ ಜುನ್ನಾ, ಎಂ.ಡಿ. ಅಬ್ದುಲ್​, ಪ್ರವೀಣಕುಮಾರ ಇತರರಿದ್ದರು.