ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ವಿಜ್ಞಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗಸ್ವಾಮೀಜಿ, ಉಪನ್ಯಾಸಕರಾದ ಡಿ.ಕಲ್ಪನಾ, ಎಚ್​.ವಿ.ಪ್ರದಿಪ್​ , ಎಚ್​.ಆರ್​.ರೇಖಾ, ಬಿ.ಜಯಶ್ರೀ, ಮಮತಾ, ಜಿ.ಆರ್​.ಬಿಂದು, ಸಿ.ಶುಭಾ, ಪಲ್ಲವಿ, ದೀಪಿಕಾ, ಕೆ.ಸಿ.ಪಲ್ಲವಿ, ಮೇಘಾ, ದೀಪಾಕಲ್ಮಡಿ, ನವ್ಯಶ್ರಿ, ನವೀನ್​, ವೇದಾವತಿ, ಗೀತಾ, ಭಾಗ್ಯಮ್ಮ, ಯುಕ್ತ, ಭಾಗ್ಯಶ್ರೀ ಇತರರು ಇದ್ದರು. 
ಜಿಲ್ಲೆ

ಜ್ಞಾನದೊಂದಿಗೆ ಮಾನವೀಯ ಮೌಲ್ಯ ಅಗತ್ಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ : ಕಲ್ಲಿನಂತಿರುವ ವಿದ್ಯಾರ್ಥಿಗಳನ್ನು ಕೆತ್ತಿ ಸುಂದರ ವಿಗ್ರಹನ್ನಾಗಿ ಮಾಡುವಂತಹ ಕಲೆಗಾರರು ನಮ್ಮ ಶಿಕ್ಷಕರು ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದರು. ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರೇರಣ ಪರ್ವ ರ್ಶಿಷಿಕೆಯಡಿ ಶನಿವಾರ ಅಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ವಿಜ್ಞಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಕ್ಷರ ಜ್ಞಾನದ ಜತೆಗೆ ಮಾನವೀಯ ಮೌಲ್ಯವನ್ನು ಕೊಟ್ಟು ಬದುಕನ್ನು ರೂಪಿಸಿಕೊಟ್ಟ ಶಿಕ್ಷಕರನ್ನು ನೆನಪಿಸಿಕೊಳ್ಳುವ ಮಹತ್ವ ಕಾರ್ಯ ಮಾಡಬೇಕು. ಮಕ್ಕಳಿಗೆ ಪಠ್ಯದ ಜತೆಗೆ ಕೌಶಲಾಭಿವೃದ್ಧಿಯಂತಹ ಶಿಕ್ಷಣ ನೀಡಿದಲ್ಲಿ ಕಲಿತ ವಿದ್ಯೆಯಿಂದ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕ, ಸಾಮಾಜಿಕ ಬೆಳೆವಣಿಗೆ ಹೊಂದಲು ಸಾಧ್ಯವಾಗುತ್ತದೆ. ತಪ್ಪು ಮಾಡಿದಾಗ ಶಿಕ್ಷಿಸಿ, ತಿದ್ದಿ ಬುದ್ಧಿ ಹೇಳಿದ ಗುರುಗಳನ್ನು ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳೇ ಅದ್ದೂರಿ ಗೌರವಿಸಿ ಸನ್ಮಾನಿಸುತ್ತಿರುವುದು ಸಂತಸದ ಸಂಗತಿ ಎಂದರು.

ಪ್ರಾಂಶುಪಾಲೆ ಅಕ್ಕಮಹಾದೇವಿ ಮಾತನಾಡಿ, ನಮ್ಮ ದೇಶದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ನಮ್ಮ ದೇಶದ ಶಿಕ್ಷಕರ ಕೈಯಲಿದೆ. ಶಿಕ್ಷಣ ಎನ್ನುವುದು ಕೇವಲ ಪದವಲ್ಲ, ಅದು ಜಗತ್ತನ್ನೇ ಬೆಳಗುವ ಅದಮ್ಯ ಶಕ್ತಿ. ಒಬ್ಬ ಶಿಕ್ಷಕ ಏನೂ ಬೇಕಾದರೂ ಆಗಬಹುದು ಎನ್ನುವುದಕ್ಕೆ ಸರ್ವಪಲ್ಲಿ ಡಾ.ಎಸ್​.ರಾಧಾಕೃಷ್ಣನ್​ ಅವರೇ ಸಾಕ್ಷಿ ಎಂದರು. ಶ್ರೀ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಆರ್​.ದೇವರಾಜು ಇದ್ದರು.

ಗೌರವ ಸನ್ಮಾನ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಕಾಲೇಜಿನ ಸುಮಾರು 30 ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು.