ಲಿಂಗಸುಗೂರಿನ ಆದರ್ಶ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ದೇಶಮುಖ ಶಿವಕುಮಾರ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಪಾಮಯ್ಯ ಮುರಾರಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಆಶಿಕ್ ಅಹ್ಮದ್, ಉಪ ತಹಸೀಲ್ದಾರ್ ಬಸವರಾಜ ಝಳಕಿಮಠ, ಬಿಇಒ ಹುಂಬಣ್ಣ ರಾಠೋಡ್, ಪಿಐ ಸಂಜೀವ ಕುಮಾರ, ಸಿಡಿಪಿಒ ಗೋಕುಲ್, ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ, ಮುಖ್ಯಶಿಕ್ಷಕ ಡಿ.ಎಸ್.ದೇಸಾಯಿ, ನ್ಯಾಯವಾದಿ ಮಹಾಲಿಂಗಪ್ಪ ಪಾಟೀಲ್, ಸಂಸ್ಥೆ ಅಧ್ಯಕ್ಷ ಸೈಯದ್ ಸಾಧಿಕ್, ಶೇಖ್ ಅಹ್ಮದ್ ಇದ್ದರು. 
ಜಿಲ್ಲೆ

ಮಾನವ ಕಳ್ಳ ಸಾಗಣೆ ತಡೆಗಟ್ಟಲು ಜಾಗೃತಿ ಅಗತ್ಯ

ಲಿಂಗಸುಗೂರು: ಸರ್ಕಾರ ಜತೆಗೆ ಜನರು ಸಹಕಾರ ನೀಡಿದಾಗ ಮಾನವ ಕಳ್ಳ ಸಾಗಣೆ ಮಟ್ಟ ಹಾಕಲು ಸಾಧ್ಯ ಎಂದು ಸ್ಥಳೀಯ ಜೆಎಂಎಫ್‌ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ದೇಶಮುಖ ಶಿವಕುಮಾರ ಹೇಳಿದರು.

ಬುಡ ಸಮೇತ ಕಿತ್ತಿ ಹಾಕುವತ್ತ ಹೆಚ್ಚಿನ ಜಾಗೃತಿ ಅಗತ್ಯ

ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಣೆ ಬುಡ ಸಮೇತ ಕಿತ್ತಿ ಹಾಕುವತ್ತ ಹೆಚ್ಚಿನ ಜಾಗೃತಿ ಅಗತ್ಯ. ಅಂಗಾಂಗ ಕಳ್ಳಸಾಗಣೆ, ಲೈಂಗಿಕ ಚಟುವಟಿ ಸೇರಿ ಇತರ ಕಾರಣಗಳಿಂದ ಮಾನವ ಕಳ್ಳ ಸಾಗಣೆ ನಡೆಯುತ್ತಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಪಾಮಯ್ಯ ಮುರಾರಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಆಶಿಕ್ ಅಹ್ಮದ್, ಉಪ ತಹಸೀಲ್ದಾರ್ ಬಸವರಾಜ ಝಳಕಿಮಠ, ಬಿಇಒ ಹುಂಬಣ್ಣ ರಾಠೋಡ್, ಪಿಐ ಸಂಜೀವ ಕುಮಾರ, ಸಿಡಿಪಿಒ ಗೋಕುಲ್, ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ, ಮುಖ್ಯಶಿಕ್ಷಕ ಡಿ.ಎಸ್.ದೇಸಾಯಿ, ನ್ಯಾಯವಾದಿ ಮಹಾಲಿಂಗಪ್ಪ ಪಾಟೀಲ್, ಸಂಸ್ಥೆ ಅಧ್ಯಕ್ಷ ಸೈಯದ್ ಸಾಧಿಕ್, ಶೇಖ್ ಅಹ್ಮದ್ ಇತರರಿದ್ದರು.