ಕಾರವಾರ: ಮಕ್ಕಳನ್ನು ವಿಧ್ಯಾಭ್ಯಾಸ ಹಾಗೂ ಕೆಲಸಕ್ಕೆ ಹೊರ ರಾಜ್ಯ ಮತ್ತು ದೇಶಗಳಿಗೆ ಕಳುಹಿಸುವಾಗ ಎಚ್ಚರವಹಿಸಿಬೇಕು, ಪ್ರತಿ ಮನೆ ಮನೆಗಳಲ್ಲಿ ಜಾಗೃತಿ ಇದ್ದಲ್ಲಿ ಮಾನವ ಕಳ್ಳ ಸಾಗಾಣಿಕೆಯನ್ನು ಕೊನೆಗಾಣಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿಎಂ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಡಿಎಚ್‌ಒ ಕಚೇರಿಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆಯು ಪ್ರಪಂಚದ ಮೂರನೇಯ ಅತಿ ದೊಡ್ಡ ಸಂಘಟಿತ ಅಪರಾಧವಾಗಿದೆ ಎಂದರು. ಬಡ ಮತ್ತು ನಿರ್ಗತಿಕ ಹೆಣ್ಣು ಮಕ್ಕಳನ್ನು ಹಣದ ಆಸೆ, ಆಮಿಷಗಳನ್ನು ತೋರಿಸಿ, ಕಳ್ಳ ಸಾಗಾಣಿಕೆ ಮಾಡಿ, ಕೂಲಿ ಕಾರ್ಮಿಕರಾಗಿ ಹಾಗೂ ವೇಶ್ಯಾವಟಿಕೆಯಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಗಂಡು ಮಕ್ಕಳು ಸಹ ಬಲಿಯಾಗುತ್ತಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಹೆಚ್ ಕೃಷ್ಣಪ್ಪ ಸ್ವಾಗತಿಸಿದರು. ಇಂಟರ್‌ನ್ಯಾಷನಲ್ ಜೆಸ್ಟೀಸ್ ಮಿಷನ್‌ನ ರಾಜ್ಯ ಮುಖ್ಯಸ್ಥ ವಿಲಿಯಂ ಕ್ರಿಸ್ಟೋಫರ್ ಹಾಗೂ ಪ್ರತಿನಿಧಿ ವೇಣುಗೋಪಾಲ ಅವರು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವ ಕುರಿತು ಉಪನ್ಯಾಸ ನೀಡಿದರು.ಎಎಸ್‌ಪಿ ಕೃಷ್ಣಮೂರ್ತಿ,ಡಿಎಚ್‌ಒ ಡಾ.ನೀರಜ್ ಬಿ.ವಿ, ಪ್ರೊಬೇಷನರಿ ಐಎಎಸ್ ಅಽಕಾರಿ ಝೂಫಿಷಾನ್ ಹಕ್ ಇದ್ದರು.