ವಿಟ್ಲ: ಶಿವಾಜಿನಗರ ಸಮೀಪದ ನೆಕ್ಕರೆಕಾಡುವಿನಲ್ಲಿ ಸೋಮವಾರ ಸಂಜೆ ಸಮಯ ಕಟ್ಟಿಗೆ ತರಲು ಗುಡ್ಡಕ್ಕೆ ಹೋದ ಮಹಿಳೆಯರಿಗೆ ಅಲ್ಲಿ ಮಾನವ ತಲೆಬುರುಡೆ ಹಾಗೂ ಎಲುಬು ಇರುವುದು ಕಂಡುಬಂದಿದೆ.ಮನೆಗೆ ಬಂದು ಮಹಿಳೆಯರು ಮನೆಯವರಿಗೆ ವಿಷಯ ತಿಳಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ. ಬಟ್ಟೆಯೂ ಅಲ್ಲೇ ಪಕ್ಕದಲ್ಲಿ ಪತ್ತೆಯಾಗಿದೆ. ಮಾನವ ದೇಹ ಹೇಗೆ ಬಂತು ಎಂಬ ಕುತೂಹಲ ಸಾರ್ವಜನಿಕರದ್ದಾಗಿದೆ. ಜನವರಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯದ್ದಿರಬಹುದಾ ಎಂಬ ಅನುಮಾನದಲ್ಲಿ ತನಿಖೆ ನಡೆಯುತ್ತಿದೆ. ವ್ಯಕ್ತಿಯ ಮನೆಯವರನ್ನು ಪೊಲೀಸರು ಬರಲು ಹೇಳಿದ್ದು, ಬಟ್ಟೆಯನ್ನು ಗುರುತು ಹಿಡಿದಲ್ಲಿ ಪ್ರಕರಣ ಬಗೆಹರಿಯಲಿದೆ.