ಜಿಲ್ಲೆ

ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ ಕೇಸ್: ಶೆಡ್​​​ನಲ್ಲಿ ಕಂಡುಬಂದ ಕಾರು, ಬೈಕ್!

ಚಿತ್ರದುರ್ಗ: ಪಾಳು ಬಿದ್ದ ಮನೆಯಲ್ಲಿ ದೊರೆತ ಐವರ ಅಸ್ಥಿಪಂಜರಗಳನ್ನು ಬೆಳಗ್ಗೆ ನಗರದ ಬಸವೇಶ್ವರ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪೋಸ್ಟ್ ಮಾರ್ಟಮ್ ಬಳಿಕ ದಾವಣಗೆರೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ.

ದಾವಣಗೆರೆ ಎಫ್ಎಸ್ಎಲ್​​​​​ಡಿಡಿ ಛಾಯಾ ಕುಮಾರಿ‌ ನೇತ್ರತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆ ಸೀನ್ ಕ್ರೈಮ್ ಆಫೀಸರ್ಸ್ ಸಾಥ್ ನೀಡಿದ್ದಾರೆ. ದಾವಣಗೆರೆ ಪೂರ್ವ ವಲಯ ಡಿಐಜಿ ಡಾ.ತ್ಯಾಗರಾಜನ್ ಕೂಡ ಭೇಟಿ ನೀಡಿದ್ದು, ಬೆಸ್ಕಾಂ ಅಧಿಕಾರಿಗಳಿಂದಲೂ‌ ಪೊಲೀಸರು ಮಾಹಿತಿ ಪಡೆಯಲಿದ್ದಾರೆ.

ಪೋಸ್ಟ್ ಮಾರ್ಟಂ ಹಾಗೂ ಎಫ್ಎಸ್ಎಲ್ ವರದಿ ಬಳಿಕ ತಜ್ಞ ವೈದ್ಯರು ಸಾವಿನ ಅಂದಾಜು ಅವಧಿ, ಕಾರಣವನ್ನು ತಿಳಿಸಬಹುದು. ಅವರ ವರದಿ ಆಧರಿಸಿ ತನಿಖೆ ಮುಂದುವರಿಸಲಾಗುವುದು ಎಂದು ಎಸ್ ಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದ್ದಾರೆ. ಮನೆಯ ಕಾರು ಶೆಡ್​​​​ನಲ್ಲಿ ಕಾರು, ಮನೆ ಮುಂದೆ ಬೈಕ್ ಇರುವುದು ಸಹ ಕಂಡುಬಂದಿದೆ. ಡೆತ್​​​ ನೋಟ್ ಸಿಕ್ಕಿದೆ ಎಂಬ ಮಾಹಿತಿ ಇದ್ದರೂ ಅಧಿಕೃತವಾಗಿ ತಿಳಿಸಿಲ್ಲ.