ಜಿಲ್ಲೆ

ಮಾನವೀಯ ಗುಣ ಮಾನವ ಧರ್ಮ

Avinash R

ಕಡಬ: ಗುರುಗಳ ಮಾರ್ಗದರ್ಶನ ಹೇಗೆ ಇರುತ್ತದೆಯೋ ಅದರಂತೆ ಶಿಷ್ಯರು ತರಬೇತಿ ಹೊಂದುತ್ತಾರೆ. ಒಬ್ಬ ಉತ್ತಮ ಗುರು ಸಮಾಜದಲ್ಲಿ ಉತ್ತಮ ಶಿಷ್ಯಂದಿರನ್ನು ಹೊಂದಿರುತ್ತಾನೆ. ಸಂಸ್ಕಾರಯುತ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಸಾಗುವುದು ಮಾನವ ಧರ್ಮ. ಕಠಿಣ ಪರಿಶ್ರಮದಿಂದ ಯಾವುದೇ ಕೆಲಸದಲ್ಲೂ ಯಶಸ್ಸು ಸಾಧ್ಯ ಎಂದು ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಹೇಳಿದರು.

ನೂಜಿಬಾಳ್ತಿಲ ಗ್ರಾಮದ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಮಾತೃಭೂಮಿ ಚೆಂಡೆ ಬಳಗ ಆಶ್ರಯದಲ್ಲಿ ಸಾಮೂಹಿಕ ಶನಿಪೂಜಾ ಕಾರ್ಯಕ್ರಮ ಹಾಗೂ ಮಾತೃಭೂಮಿ ಸಿಂಗಾರಿ ಮೇಳ ರಂಗಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೂಜಿ ಶ್ರೀಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಮ್ ಅಧ್ಯಕ್ಷತೆ ವಹಿಸಿದ್ದರು. ದೈವಸ್ಥಾನ ಗೌರವ ಅಧ್ಯಕ್ಷ ಮೃತ್ಯುಂಜಯ ಭಿಡೆ ಕೆರೆತೋಟ, ರಾಮಚಂದ್ರ ಗೌಡ ಎಳುವಾಳೆ, ನೂಜಿಬೈಲ್ ಶ್ರೀ ಉಳ್ಳಾಲ್ತಿ ಹಿಂದು ಚಾರಿಟೆಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಲಿಂಗಪ್ಪ ಗೌಡ ಕಾನದಬಾಗಿಲು, ಬದಿಬಾಗಿಲು ಪಿಲಿಚಾಮುಂಡಿ ದೈವಸ್ಥಾನ ಅಧ್ಯಕ್ಷ ಬೇಬಿ ಬಂಗೇರ, ಕೃಷಿಕರಾದ ಕೃಷ್ಣಪ್ಪ ಗೌಡ ಎಲ್ಯ, ಗಿರಿಯಪ್ಪ ಗೌಡ ಕೇಪುಂಜ, ಚೆಂಡೆ ತರಬೇತುದಾರ ಚಂದನ್ ಕಾಸರಗೋಡು ಉಪಸ್ಥಿತರಿದ್ದರು.

ಶಿಕ್ಷಕಿ ಪ್ರೇಮಲತಾ ಸ್ವಾಗತಿಸಿ. ಶಿಕ್ಷಕ ಗಣೇಶ್ ಎನ್.ನಿರೂಪಿಸಿ, ವಂದಿಸಿದರು. ಹಲವು ಸಮಯಗಳಿಂದ ತರಬೇತಿ ಪಡೆದ ಮಾತೃಭೂಮಿ ಚೆಂಡೆ ಬಳಗದ ಸದಸ್ಯರ ರಂಗಪ್ರವೇಶ ಕಾರ್ಯಕ್ರಮ ನಡೆಯಿತು. ಬಳಗದ ವತಿಯಿಂದ ಚೆಂಡೆ ತರಬೇತುದಾರ ಚಂದನ್ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು. ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಹಿಂದು ಸಮಾಜ ಯೋಚಿಸಬೇಕಿದೆ. ಸಣ್ಣ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದೆ ಇರುವುದರಿಂದ ಸಮಾಜ ದಾರಿ ತಪ್ಪುತ್ತಿದೆ. ಹಿರಿಯರನ್ನು ಗೌರವಿಸುವುದು, ನಿತ್ಯ ಹೇಗೆ ಜೀವನ ನಡೆಸಬೇಕು ಎಂಬುದನ್ನು ಕಲಿಸಿದಾಗ ಮಾತ್ರ ಜೀವನ ಪಾಠ ಕಲಿಯಲು ಸಾಧ್ಯ. ಸಮಯ ಪಾಲನೆ, ಶಿಸ್ತು ಬದ್ಧ ಜೀವನ ನಮ್ಮದಾಗಲಿ. ಉಮೇಶ್ ಶೆಟ್ಟಿ ಸಾಯಿರಾಮ್, ಅಧ್ಯಕ್ಷ ನೂಜಿ ಶ್ರೀಉಳ್ಳಾಲ್ತಿ ಅಮ್ಮನವರ ಕ್ಷೇತ್ರ
ಉಮೇಶ್ ಶೆಟ್ಟಿ ಸಾಯಿರಾಮ್, ಅಧ್ಯಕ್ಷ ನೂಜಿ ಶ್ರೀಉಳ್ಳಾಲ್ತಿ ಅಮ್ಮನವರ ಕ್ಷೇತ್ರ